01 ಫೆಬ್ರವರಿ 2025 ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ಬೃಹತ ಉದ್ಯೋಗ ಮೇಳ ಕುರಿತು ಮಾಹಿತಿ ನಿಮಗಾಗಿ

01 ಫೆಬ್ರವರಿ 2025 ರಂದು ಬಾಗಲಕೋಟೆಯಲ್ಲಿ ನಡೆಯಲಿರುವ ಬೃಹತ ಉದ್ಯೋಗ ಮೇಳ ಕುರಿತು ಮಾಹಿತಿ ನಿಮಗಾಗಿ
Published by Bhagya R K
25 ಜನವರಿ 2025 Others

ಜಿಲ್ಲಾ ಕಚೇರಿ, ಜಿಲ್ಲಾ ಪಂಚಾಯತ್, ಉದ್ಯೋಗ ವಿನಿಮಯ ಕೇಂದ್ರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ - 2025 ನಡೆಯುತ್ತಿದೆ.

        ಈ ಉದ್ಯೋಗ ಮೇಳವು 2025ರ ಫೆಬ್ರವರಿ 1 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 4:00 ರವರೆಗೆ ಕಲಾಭವನ (ಮ್ಯೂಸಿಯಂ) ನವನಗರ, ಬಾಗಲಕೋಟೆನಲ್ಲಿ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಕೌಶಲ್ಯಗಳ ಅಭಿವೃದ್ದಿ, ಕ್ಯಾರಿಯರ್ ಅಭಿವೃದ್ಧಿ, ಮತ್ತು ಹೊಸ ಉದ್ಯೋಗಗಳಿಗಾಗಿ ಇಂಟರ್ವ್ಯೂ ಚಾನ್ಸ್‌ ನೀಡಲು ಉದ್ದೇಶಿಸಲಾಗಿದೆ.

ಮೇಳದ ಪ್ರಮುಖಾಂಶಗಳು:
- 40ಕ್ಕೂ ಹೆಚ್ಚು ಹೆಸರಾಂತ ಮಲ್ಟಿನ್ಯಾಷನಲ್ ಕಂಪನಿಗಳು (MNCs) ಮತ್ತು ಪ್ರಾದೇಶಿಕ ಸಂಸ್ಥೆಗಳು ಭಾಗವಹಿಸುತ್ತವೆ.
- IT, Manufacturing, HealthCare, Education, Sales & Marketing ಮುಂತಾದ ವೃತ್ತಿ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿರುತ್ತವೆ.
- 18 ರಿಂದ 35 ವರ್ಷ ವಯಸ್ಸಿನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ. ಜಾಬ್ ಇಂಟರ್ವ್ಯೂ ತಕ್ಷಣದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

- ಅರ್ಜಿ ಸಲ್ಲಿಕೆ ಮತ್ತು ಪ್ರಕ್ರಿಯೆ:
ಆಧಾರ್ ಕಾರ್ಡ್, ಪ್ರಮಾಣಪತ್ರಗಳು ಮತ್ತು ನಿಮ್ಮ ಅಪ್‌ಡೇಟೆಡ್ ರೆಸ್ಯೂಮ್ ತರಲು ತಪ್ಪದೆ ಗಮನ ಕೊಡಿ.
- ವೃತ್ತಿ ತರಬೇತಿ (Skill Development) ಮತ್ತು ಪ್ರಮುಖ ಉದ್ಯೋಗ ತಂತ್ರಗಳು ಕುರಿತು ಮಾಹಿತಿ ಪಡೆಯಲು ಅವಕಾಶ.

- ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ : 118 ನವನಗರ ಬಾಗಲಕೋಟಿ 
- ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08354-295210 / 8147111236, 6362700132 ಅನ್ನು ಸಂಪರ್ಕಿಸಬಹುದು.

ಆಸಕ್ತ ಅಭ್ಯರ್ಥಿಗಳು ನಿಮ್ಮ ಭವಿಷ್ಯ ಕಟ್ಟಲು, ಇಂಟರ್ವ್ಯೂಗಳಿಗಾಗಿ ಈ ಉದ್ಯೋಗ ಮೇಳವನ್ನು ತಪ್ಪದೇ ಭೇಟಿ ನೀಡಿ! 

Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.