* ವಿಡಿಯೊ ಸ್ಟ್ರೀಮಿಂಗ್ ತಾಣವಾದ ಯೂಟ್ಯೂಬ್‌ನ ಭಾರತ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿಯಾಗಿ (ಎಂ.ಡಿ) ಗುಂಜನ್ ಸೋನಿ ನೇಮಕಗೊಂಡಿದ್ದಾರೆ.
* ಗುಂಜನ್ ಸೋನಿ ಅವರು ಮೊದಲೇ ಸಿಂಗಪುರ ಮೂಲದ ಇ–ಕಾಮರ್ಸ್ ತಾಣವಾದ ZALORA ನ ಸಿಇಒ ಆಗಿದ್ದರು ಮತ್ತು ಇದಕ್ಕೂ ಮುಂಚೆ ಮಿಂತ್ರಾ ಹಾಗೂ ಸ್ಟಾರ್ ಇಂಡಿಯಾದ ಪ್ರಮುಖ ಹುದ್ದೆಗಳಲ್ಲಿ ಕೆಲಸಮಾಡಿದ ಅನುಭವವನ್ನು ಹೊಂದಿದ್ದಾರೆ.
* ಸೋನಿ ಅವರು ಡಿಜಿಟಲ್ ಮಾರ್ಕೆಟಿಂಗ್, ಮೀಡಿಯಾ ಮಾರ್ಕೆಟಿಂಗ್ ಮತ್ತು ಇ–ಕಾಮರ್ಸ್ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದಾರೆ.
* ತಮ್ಮ ನೇಮಕಕ್ಕೆ ಸಂತೋಷ ವ್ಯಕ್ತಪಡಿಸಿದ ಗುಂಜನ್ ಸೋನಿ, ಭಾರತದಲ್ಲಿ ಯೂಟ್ಯೂಬ್, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಸಮುದಾಯಗಳು ಹಲವು ಮಹತ್ವಪೂರ್ಣ ಬದಲಾವಣೆಗಳನ್ನು ತರಲು ಸಾಧನೆ ಮಾಡಿದ್ದೀರಿ ಎಂದು ತಿಳಿಸಿದ್ದಾರೆ.
ಯೂಟ್ಯೂಬ್ ಇಂಡಿಯಾದ ನೂತನ ಎಂ.ಡಿ ಆಗಿ "ಗುಂಜನ್ ಸೋನಿ" ನೇಮಕ
Published by Jyoti Angadi
28 ಏಪ್ರಿಲ್ 2025