* ಭಾರತೀಯರ ಅತಿದೊಡ್ಡ ಮತ್ತು ಅತ್ಯಂತ ಪ್ರಾಚೀನ ಸಾಂಸ್ಕೃತಿಕ ಹಬ್ಬವಾದ ದೀಪಾವಳಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಮತ್ತೊಂದು ಮಹತ್ವದ ಗೌರವವನ್ನು ಪಡೆದಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಯುನೆಸ್ಕೋದ ಮಹತ್ವದ ಸಭೆಯಲ್ಲಿ ದೀಪಾವಳಿಯನ್ನು ಯುನೆಸ್ಕೋ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
* ಈ ಘೋಷಣೆ ನಡೆದ ಕ್ಷಣದಲ್ಲಿ ಕೆಂಪು ಕೋಟೆ ಪ್ರದೇಶ “ವಂದೇ ಮಾತರಂ” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆಗಳಿಂದ ಗುನುಗಿತು. ದೀಪಾವಳಿ ಸೇರ್ಪಡೆಯೊಂದಿಗೆ, ಭಾರತವು ಈಗ ಯುನೆಸ್ಕೋ ಪ್ರತಿನಿಧಿ ಪಟ್ಟಿಯಲ್ಲಿ ಒಟ್ಟು 15 ಸಾಂಸ್ಕೃತಿಕ ಅಂಶಗಳನ್ನು ಹೊಂದಿದೆ. ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗರ್ಭಾ ನೃತ್ಯ, ಯೋಗ, ವೇದ ಪಠಣ ಪರಂಪರೆ ಮತ್ತು ರಾಮಲೀಲೆಯಂತ ಸೂಪ್ರಸಿದ್ಧ ಸಂಪ್ರದಾಯಗಳ ಪಟ್ಟಿಗೆ ಈಗ ದೀಪಾವಳಿಯೂ ಸೇರಿಕೊಂಡಿದೆ.
* ಪ್ರಧಾನಿ ನರೆಂದ್ರ ಮೋದಿ ಇದನ್ನು “ಭಾರತ ಮತ್ತು ವಿಶ್ವಾದ್ಯಂತದ ಭಾರತೀಯರಿಗೆ ಗೌರವದ ಮತ್ತು ರೋಮಾಂಚನದ ಕ್ಷಣ”ವೆಂದು ಹೇಳಿದ್ದಾರೆ. ದೀಪಾವಳಿ ನಮ್ಮ ಸಂಸ್ಕೃತಿ, ನೀತಿ ಮತ್ತು ನಾಗರಿಕ ಮೌಲ್ಯಗಳ ಮೂಲವೆಂದು ಉಲ್ಲೇಖಿಸಿದ ಅವರು,“ಈ ಹಬ್ಬ ಜ್ಞಾನ, ಸತ್ಸಂಸ್ಕಾರ ಮತ್ತು ಸದಾಚಾರದ ಸಂಕೇತ. ಯುನೆಸ್ಕೋ ಮಾನ್ಯತೆ ದೀಪಾವಳಿಯ ಜಾಗತಿಕ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ,” ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
* ಭಾರತದಲ್ಲಿ ಮೊದಲ ಬಾರಿಗೆ ICH ಅಧಿವೇಶನ: ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಯುನೆಸ್ಕೋ ಅಂತರಸರ್ಕಾರಿ ಸಮಿತಿಯ 20ನೇ ಅಧಿವೇಶನವನ್ನು ಭಾರತವು ಮೊದಲ ಬಾರಿಗೆ ಆಯೋಜಿಸಿದೆ. ಡಿಸೆಂಬರ್ 8ರಿಂದ 13ರವರೆಗೆ ದೆಹಲಿಯ ಕೆಂಪು ಕೋಟೆಯಲ್ಲಿ ಈ ಅಧಿವೇಶನ ನಡೆಯುತ್ತಿದೆ.
* ಬಳಕೆಯ ಪರಂಪರೆ, ಮೌಲ್ಯಗಳು ಮತ್ತು ಬೆಳಕಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ದೀಪಾವಳಿಯ ಸೇರ್ಪಡೆ ಮಹತ್ವದ ಹೆಜ್ಜೆಯಾಗಿದೆ.
ಗುರುವಾರ, 11 ಡಿಸೆಂಬರ್ 2025
10:55 ಪೂರ್ವಾಹ್ನ
Daily PDF
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ: ಬೆಳಕಿನ ಹಬ್ಬಕ್ಕೆ ಜಾಗತಿಕ ಗೌರವ
Authored by:
Akshata Halli