➤ ಪ್ರತಿ ವರ್ಷ ಜುಲೈ 11 ರಂದು ಜಾಗತಿಕ ಮಟ್ಟದಲ್ಲಿ 'ವಿಶ್ವ ಜನಸಂಖ್ಯಾ ದಿನ'ವನ್ನು ಆಚರಿಸಲಾಗುತ್ತದೆ. ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆ, ಅದರ ಪರಿಣಾಮಗಳು, ಲಿಂಗ ಸಮಾನತೆ, ಕುಟುಂಬ ಯೋಜನೆ ಮತ್ತು ಪರಿಸರದ ಮೇಲಾಗುವ ಪ್ರಭಾವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
➤ ವಿಶ್ವ ಜನಸಂಖ್ಯಾ ದಿನ 2026 ರ ಧ್ಯೇಯವಾಕ್ಯ (Theme): "ಯುವಜನರ ಆಸೆ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು: ಇಂದು ಮತ್ತು ಭವಿಷ್ಯದಲ್ಲಿ" (Realizing the hopes and aspirations of young people: today and in the future)
➤ 1987ರ ಜುಲೈ 11ರಂದು ಜಾಗತಿಕ ಜನಸಂಖ್ಯೆ 5 ಶತಕೋಟಿ ತಲುಪಿದ ನೆನಪಿಗಾಗಿ, ಜನಸಂಖ್ಯಾ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು (UNDP) 1989ರಲ್ಲಿ ಈ ದಿನವನ್ನು 'ವಿಶ್ವ ಜನಸಂಖ್ಯಾ ದಿನ'ವನ್ನಾಗಿ ಘೋಷಿಸಿತು, ಹಾಗೂ ಇದು 1990 ರಿಂದ ಅಧಿಕೃತವಾಗಿ ಆಚರಣೆಗೆ ಬಂದಿತು.
➤ ಜಾಗತಿಕ ಜನಸಂಖ್ಯೆಯ ಬೆಳವಣಿಗೆಯ ಹಂತಗಳು:
  • 1987: 5 ಶತಕೋಟಿ (5 Billion)
  • 1999: 6 ಶತಕೋಟಿ (6 Billion)
  • 2011: 7 ಶತಕೋಟಿ (7 Billion)
  • 2022: 8 ಶತಕೋಟಿ (8 Billion)
ಪ್ರಸ್ತುತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿದೆ.➤ 
➤ ವಿಶ್ವ ಜನಸಂಖ್ಯಾ ದಿನದ ಮುಖ್ಯ ಉದ್ದೇಶಗಳು ಮತ್ತು ಮಹತ್ವ:
  • ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ: ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಸಮಾನ ಹಕ್ಕುಗಳನ್ನು ಒದಗಿಸುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಇದು ಸಾರುತ್ತದೆ.
  • ಕುಟುಂಬ ಯೋಜನೆ (Family Planning): ಸುರಕ್ಷಿತ ಮತ್ತು ಸ್ವಯಂಪ್ರೇರಿತ ಕುಟುಂಬ ಯೋಜನೆಯು ಮಾನವ ಹಕ್ಕುಗಳ ಒಂದು ಭಾಗವಾಗಿದೆ ಎಂಬುದನ್ನು ಜನರಿಗೆ ತಲುಪಿಸುವುದು.
  • ಸುಸ್ಥಿರ ಅಭಿವೃದ್ಧಿ (Sustainable Development): ಸೀಮಿತ ನೈಸರ್ಗಿಕ ಸಂಪನ್ಮೂಲಗಳ ನಡುವೆ ಜನಸಂಖ್ಯೆ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳುವುದು.
  • ಪ್ರಸವಪೂರ್ವ ಮತ್ತು ಪ್ರಸವೋತ್ತರ ಆರೋಗ್ಯ: ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದು.
  • ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ