➤ ಭಾರತದ ಟಾಪ್ 10 ಉಣ್ಣೆ ಉತ್ಪಾದನಾ ರಾಜ್ಯಗಳು (2024-25/26):
FY24 ಮತ್ತು FY25ರ ಅಂಕಿಅಂಶಗಳ ಆಧಾರದ ಮೇಲೆ ಭಾರತದ ಪ್ರಮುಖ ಉಣ್ಣೆ ಉತ್ಪಾದನಾ ರಾಜ್ಯಗಳ ಪಟ್ಟಿ ಈ ಕೆಳಗಿನಂತಿದೆ:
ಶ್ರೇಣಿ,ರಾಜ್ಯ - ಉತ್ಪಾದನೆ (ಸಾವಿರ ಕೆ.ಜಿ.ಗಳಲ್ಲಿ)
1.ರಾಜಸ್ಥಾನ - 16,013.50
2.ಜಮ್ಮು ಮತ್ತು ಕಾಶ್ಮೀರ - 7,770
3.ಕರ್ನಾಟಕ - 6,472
4.ತೆಲಂಗಾಣ - 4,422
5.ಗುಜರಾತ್ - 2,083.50
6.ಮಹಾರಾಷ್ಟ್ರ - 1,601.28
7.ಹಿಮಾಚಲ ಪ್ರದೇಶ - 1,422.69
8.ಉತ್ತರ ಪ್ರದೇಶ - 942
9.ಆಂಧ್ರಪ್ರದೇಶ - 778.23
10.ಹರಿಯಾಣ - 674.61
- ಜಮ್ಮು ಮತ್ತು ಕಾಶ್ಮೀರ: ಗುಣಮಟ್ಟದ 'ಫೈನ್ ವೂಲ್' (Fine Wool) ಉತ್ಪಾದನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಂಚೂಣಿಯಲ್ಲಿದೆ. ಇಲ್ಲಿನ ಮೆರಿನೊ ಮತ್ತು ಚಾಂಗ್‌ಥಾಂಗಿ ತಳಿಯ ಉಣ್ಣೆಯನ್ನು ಶಾಲುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.- ಕರ್ನಾಟಕದ ಸ್ಥಾನ: ಕರ್ನಾಟಕವು ದೇಶದ 3ನೇ ಅತಿದೊಡ್ಡ ಉಣ್ಣೆ ಉತ್ಪಾದನಾ ರಾಜ್ಯವಾಗಿದೆ. ಇಲ್ಲಿ ಉತ್ಪಾದನೆಯಾಗುವ ಮಧ್ಯಮ ಗಾತ್ರದ ಉಣ್ಣೆಯನ್ನು ಹೆಚ್ಚಾಗಿ ಕಂಬಳಿ ಮತ್ತು ರಗ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
- ಅತಿ ಹೆಚ್ಚು ಬೆಳವಣಿಗೆ: ವಾರ್ಷಿಕ ಬೆಳವಣಿಗೆ ದರದಲ್ಲಿ (AGR) ಪಂಜಾಬ್ (22.04%) ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು (17.19%) ಎರಡನೇ ಸ್ಥಾನದಲ್ಲಿದೆ.
➤ ಉಣ್ಣೆಯ ವಿಧಗಳು ಮತ್ತು ಬಳಕೆ : ಭಾರತದಲ್ಲಿ ಉತ್ಪಾದನೆಯಾಗುವ ಉಣ್ಣೆಯನ್ನು ಮೂರು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು:
- ಕಾರ್ಪೆಟ್ ಗ್ರೇಡ್ (85%): ಅತಿ ಹೆಚ್ಚು ಉತ್ಪಾದನೆಯಾಗುವ ವಿಧ, ಜಮಖಾನ ಮತ್ತು ಕಾರ್ಪೆಟ್ ತಯಾರಿಕೆಗೆ ಬಳಕೆ.
- ಅಪ್ಯಾರಲ್ ಗ್ರೇಡ್ (5%): ಉಡುಪುಗಳ ತಯಾರಿಕೆಗೆ ಬಳಸುವ ಉತ್ತಮ ಗುಣಮಟ್ಟದ ಉಣ್ಣೆ.
- ಒರಟು ಉಣ್ಣೆ (Coarser Grade - 10%): ಕೈಗಾರಿಕಾ ಬಳಕೆಗೆ ಮತ್ತು ಸ್ಥಳೀಯ ಕಂಬಳಿಗಳಿಗೆ ಬಳಕೆ.