➤ ಭಾರತದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, 2026ರ ಆಗಸ್ಟ್ ತಿಂಗಳ ಸಗಟು ದರ ಆಧಾರಿತ ಹಣದುಬ್ಬರ ಪ್ರಮಾಣವು (Wholesale Price Index - WPI) ಶೇ. 9.92 ಕ್ಕೆ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ ಇದು ಶೇ. 9.78 ರಷ್ಟಿತ್ತು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (Ministry of Commerce and Industry) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲಿ ಈ ಅಂಶ ತಿಳಿದುಬಂದಿದೆ.
- ಪ್ರಮುಖ ಕಾರಣ: ಆಹಾರ ಪದಾರ್ಥಗಳು, ಇಂಧನ ಮತ್ತು ವಿದ್ಯುತ್ ಹಾಗೂ ತಯಾರಿಕಾ ವಲಯದ (Manufactured Products) ಸರಕುಗಳ ಬೆಲೆ ಏರಿಕೆ.
- ಮೂಲ ವರ್ಷ (Base Year): ಹೊಸದಾಗಿ ಪರಿಷ್ಕರಿಸಲಾದ 2022-23 ಮೂಲ ವರ್ಷದ ಆಧಾರದ ಮೇಲೆ ಈ ದತ್ತಾಂಶವನ್ನು ಲೆಕ್ಕಹಾಕಲಾಗಿದೆ.
- ಒಟ್ಟಾರೆ WPI ಸೂಚ್ಯಂಕ: ಜುಲೈನಲ್ಲಿ 110.0 ರಷ್ಟಿದ್ದ ಆಲ್ ಇಂಡಿಯಾ WPI ಸೂಚ್ಯಂಕವು ಆಗಸ್ಟ್‌ನಲ್ಲಿ 110.8 ಕ್ಕೆ ಏರಿಕೆಯಾಗಿದೆ.
➤ ವಲಯವಾರು ಹಣದುಬ್ಬರ ದರಗಳ ವಿವರ:
| ಪ್ರಮುಖ ವಲಯಗಳು (Major Groups) | ಆಗಸ್ಟ್ 2026 (August 2026) | ಜುಲೈ 2026 (July 2026) |
| ಪ್ರಾಥಮಿಕ ವಸ್ತುಗಳು (Primary Articles) | ಶೇ. 7.76 | ಶೇ. 8.52 |
| ಇಂಧನ ಮತ್ತು ವಿದ್ಯುತ್ (Fuel & Power) | ಶೇ. 22.93 | ಶೇ. 20.05 |
| ತಯಾರಿಕಾ ಉತ್ಪನ್ನಗಳು (Manufactured Products) | ಶೇ. 8.37 | ಶೇ. 8.29 |
| ಆಹಾರ ಸೂಚ್ಯಂಕ (WPI Food Index) | ಶೇ. 7.05 | ಶೇ. 6.65 |
➤ ಬೆಲೆ ಏರಿಕೆಗೆ ಮುಖ್ಯ ಕಾರಣಗಳು:
- ಇಂಧನ ಮತ್ತು ಕಚ್ಚಾ ತೈಲ ಬೆಲೆ ಏರಿಕೆ: ಪಶ್ಚಿಮ ಏಷ್ಯಾ ಸಂಘರ್ಷ (West Asia Conflict) ಮತ್ತು ಹಾರ್ಮುಜ್ ಜಲಸಂಧಿ (Strait of Hormuz) ದಿಗ್ಬಂಧನದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಹಾಗೂ ರಸಗೊಬ್ಬರಗಳ ಬೆಲೆ ಹೆಚ್ಚಾಗಿದ್ದು, ಇದು ಸಾರಿಗೆ ಮತ್ತು ಉತ್ಪಾದನಾ ವೆಚ್ಚದ ಮೇಲೆ ನೇರ ಪರಿಣಾಮ ಬೀರಿದೆ.
- ಆಹಾರ ಪದಾರ್ಥಗಳ ದರ ಏರಿಕೆ: ಅಸಮತೋಲಿತ ಮುಂಗಾರು ಮತ್ತು ಎಲ್ ನಿನೋ (El Nino) ಪ್ರಭಾವದಿಂದಾಗಿ ಕೃಷಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಆಹಾರ ಸೂಚ್ಯಂಕ ಶೇ. 7.05 ಕ್ಕೆ ಏರಿದೆ.
- ತಯಾರಿಕಾ ವಲಯ: ಮೂಲ ಲೋಹಗಳು (Basic Metals) ಮತ್ತು ರಾಸಾಯನಿಕ ವಸ್ತುಗಳ ವೆಚ್ಚ ಹೆಚ್ಚಿರುವುದರಿಂದ ತಯಾರಿಕಾ ವಲಯದ WPI ಶೇ. 8.37 ಕ್ಕೆ ಜಿಗಿದಿದೆ.
➤ ಆರ್‌ಬಿಐ ನಾಯಾಣಿಕ ನೀತಿ ಸಮಿತಿಯು (RBI Monetary Policy Committee) ಇತ್ತೀಚಿನ ಸಭೆಯಲ್ಲಿ ರೆಪೋ ದರವನ್ನು (Repo Rate) ಶೇ. 5.25 ರಷ್ಟರಲ್ಲಿಯೇ ಯಥಾವತ್ತಾಗಿ ಕಾಯ್ದುಕೊಂಡಿದೆ. FY27 ಕ್ಕೆ ಚಿಲ್ಲರೆ ಹಣದುಬ್ಬರ (Retail Inflation - CPI) ಮುನ್ಸೂಚನೆಯನ್ನು ಶೇ. 5 ಕ್ಕೆ ಅಂದಾಜಿಸಿದೆ.
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ