➤ ಅಮೆರಿಕ ಮೂಲದ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯಾದ ವಲ್ಟರ್ (Vultr), ತಮಿಳುನಾಡಿನ ಚೆನ್ನೈ ನಗರದಲ್ಲಿ 20 ಮೆಗಾವ್ಯಾಟ್ (MW) ಸಾಮರ್ಥ್ಯದ ಕೃತಕ ಬುದ್ಧಿಮತ್ತೆ (Artificial Intelligence - AI) ಸೂಪರ್ ಕ್ಲಸ್ಟರ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದೆ. ಇದು ಭಾರತದಲ್ಲಿ AMD ಇನ್‌ಸ್ಟಿಂಕ್ಟ್ ಜಿಪಿಯುಗಳ ಅತಿ ದೊಡ್ಡ ನಿಯೋಜನೆಯಾಗಿದ್ದು, ದೇಶದ ತಂತ್ರಜ್ಞಾನ ವಲಯದಲ್ಲಿ ಹೊಸ ಮೈಲಿಗಲ್ಲಾಗಿದೆ.
- ಸಾಮರ್ಥ್ಯ: 20 ಮೆಗಾವ್ಯಾಟ್ (MW).
- ತಂತ್ರಜ್ಞಾನ/ಪ್ರೊಸೆಸರ್: AMD ಇನ್‌ಸ್ಟಿಂಕ್ಟ್ MI355X GPUಗಳು (ಆರಂಭಿಕ ಹಂತದಲ್ಲಿ ಸುಮಾರು 10,000 GPUಗಳ ನಿಯೋಜನೆ).
- ಮುಂದಿನ ಗುರಿ: 2028ರ ವೇಳೆಗೆ ಭಾರತದಲ್ಲಿ 600 MW ಮತ್ತು 2029ರ ವೇಳೆಗೆ ಗಿಗಾವ್ಯಾಟ್ (GW) ಮಟ್ಟದ AI ಮೂಲಸೌಕರ್ಯ ಸಾಮರ್ಥ್ಯವನ್ನು ತಲುಪುವ ಗುರಿಹೊಂದಿದೆ.
➤ ಈ ಯೋಜನೆಯ ವಿಶೇಷತೆಗಳು:
1. ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ: ಅಮೆರಿಕದ ಒಹಾಯೋದಲ್ಲಿರುವ ಸ್ಪ್ರಿಂಗ್‌ಫೀಲ್ಡ್ ಸೌಲಭ್ಯದ ನಂತರ, ವಿಶ್ವದಲ್ಲೇ ವಲ್ಟರ್ ಸಂಸ್ಥೆಯ ಎರಡನೇ ಅತಿ ದೊಡ್ಡ ಎಐ ಮೂಲಸೌಕರ್ಯ ಯೋಜನೆಯಾಗಿ ಚೆನ್ನೈ ಸೂಪರ್ ಕ್ಲಸ್ಟರ್ ಹೊರಹೊಮ್ಮಿದೆ.
2. ದತ್ತಾಂಶ ಸಾರ್ವಭೌಮತ್ವ (Data Sovereignty): ಭಾರತದ ಸ್ಥಳೀಯ ಸ್ಟಾರ್ಟ್‌ಅಪ್‌ಗಳು, ಸಂಶೋಧನಾ ಸಂಸ್ಥೆಗಳು, ಎಐ ಲ್ಯಾಬ್‌ಗಳು ಮತ್ತು ಉದ್ಯಮಗಳಿಗೆ ಸ್ಥಳೀಯವಾಗಿ ಅತ್ಯುನ್ನತ ಕಮ್ಯೂಟ್ ಶಕ್ತಿ ದೊರೆಯಲಿದೆ. ಇದರಿಂದ ಭಾರತದ ಡೇಟಾ ಭಾರತದಲ್ಲೇ ಸುರಕ್ಷಿತವಾಗಿರಲು (Data Residency) ಸಹಕಾರಿಯಾಗುತ್ತದೆ.
3. ಮುಕ್ತ ಸಾಫ್ಟ್‌ವೇರ್ ಪರಿಸರ ವ್ಯವಸ್ಥೆ: ಈ ಸೌಲಭ್ಯವು AMD ROCm ಮುಕ್ತ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಅನ್ನು ಬಳಸಲಿದ್ದು, ಡೆವಲಪರ್‌ಗಳಿಗೆ ಅತ್ಯಾಧುನಿಕ ಎಐ ಫ್ರೇಮ್‌ವರ್ಕ್‌ಗಳು ಮತ್ತು ಮಾದರಿಗಳನ್ನು ಸುಲಭವಾಗಿ ಬಳಸಲು ಅನುವು ಮಾಡಿಕೊಡುತ್ತದೆ.
ಚೆನ್ನೈನಲ್ಲಿ ವಲ್ಟರ್ನಿಂದ 20 ಮೆಗಾವ್ಯಾಟ್ ಸಾಮರ್ಥ್ಯದ ಭಾರತದ ಅತಿ ದೊಡ್ಡ ಎಐ ಸೂಪರ್ ಕ್ಲಸ್ಟರ್ ಆರಂಭ!
Published by Akshata Halli
3 hours ago