* ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯಾದ ಸುನೀಲ್ ಕುಮಾರ್ ಯಾದವ್ ಅವರನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ನಿರ್ದೇಶಕರಾಗಿ ಏಪ್ರಿಲ್ 26 ರಂದು (ಶುಕ್ರವಾರ) ನೇಮಕ ಮಾಡಲಾಗಿದೆ.
* ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಹೊರಡಿಸಿದ ಆದೇಶದ ಪ್ರಕಾರ ಯಾದವ್ ಅವರು ಹುದ್ದೆಯ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ ಮುಂದಿನವರೆಗೆ ಕೇಂದ್ರ ಸಿಬ್ಬಂದಿ ಯೋಜನೆಯಡಿ ಹುದ್ದೆಗೆ ನೇಮಕಾತಿಗೆ ಆಯ್ಕೆಯಾಗಿದ್ದಾರೆ.
* ವಸತಿ ಮತ್ತು ನಗರ ವ್ಯವಹಾರ ಮತ್ತು ಸಚಿವಾಲಯದಲ್ಲಿ ಸುನಿಲ್ ಕುಮಾರ ಯಾದವ್ ಅವರನ್ನು ಹೊಸ ಪಾತ್ರವನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡಲು ತಕ್ಷಣವೆ ಪ್ರಸ್ತುತ ಕರ್ತವ್ಯಗಳಿಂದ ಮುಕ್ತಗೊಳಿಸಬೇಕೆಂದು DoPT ಆದೇಶವನ್ನು ಹೊರಡಿಸಿದೆ.
* ಸುನಿಲ್ ಕುಮಾರ್ ಯಾದವ್ ಅವರನ್ನು MoHUA ಯ ನಿರ್ದೇಶಕರಾಗಿ ನೇಮಕ ಮಾಡಿರುವುದು ಸುಸ್ಥಿರ ನಗರಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮತ್ತು ದೇಶಾದ್ಯಂತದ ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಚಿವಾಲಯದ ನಿರಂತರ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
* ಸುನೀಲ್ ಕುಮಾರ್ ಯಾದವ್ ಅವರು ವಸತಿ ನಗರ ಯೋಜನೆಗಳ ಕುರಿತು ಮೂಲಸೌಕರ್ಯದ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಸ್ಮಾರ್ಟ್ ಸಿಟಿ ಉಪಕ್ರಮಗಳ ಸೇರಿದಂತೆ ಎಲ್ಲ ರೀತಿಯ ನಗರ ಅಭಿವೃದ್ಧಿಯ ಮೇಲೆ ವಿವಿಧ ಅಂಶಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಸೋಮವಾರ, 29 ಎಪ್ರಿಲ್ 2024
1:59 ಅಪರಾಹ್ನ
Daily PDF
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶಕರಾಗಿ ಸುನಿಲ್ ಕುಮಾರ್ ಯಾದವ್ ನೇಮಕ
Authored by:
Bhagya R K