* ರಾಜ್ಯದಲ್ಲಿ ವಂದೇ ಭಾರತ್ ರೈಲುಗಳಿಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆ, ನೈರುತ್ಯ ರೈಲ್ವೆ ಬೆಂಗಳೂರಿನ ಬೈಯಪ್ಪನಹಳ್ಳಿ (ಎಸ್.ಎಂ.ವಿ.ಬಿ), ಥಣಿಸಂದ್ರ ಮತ್ತು ಹುಬ್ಬಳ್ಳಿಯಲ್ಲಿ ವಿಶೇಷ ನಿರ್ವಹಣೆಗೆ ಮೂರು ಡಿಪೊಗಳನ್ನು ಸ್ಥಾಪಿಸಲು ಯೋಜಿಸಿದೆ.
* ರೈಲ್ವೆ ಮಂಡಳಿ ವಂದೇ ಭಾರತ್ ರೈಲುಗಳಿಗೆ ಪ್ರತ್ಯೇಕ ಡಿಪೊ ಅಗತ್ಯವಿರುವುದಾಗಿ ಮನವರಿಕೆಗೊಂಡು, ₹619.55 ಕೋಟಿಯ ವೆಚ್ಚದಲ್ಲಿ ಹೊಸ ಡಿಪೊ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಪ್ರಸ್ತುತ ಇತರ ರೈಲುಗಳೊಂದಿಗೆ ವಂದೇ ಭಾರತ್ ರೈಲುಗಳ ನಿರ್ವಹಣೆ ನಡೆಯುತ್ತಿರುವುದರಿಂದ ಸ್ಥಳದ ಕೊರತೆಯಿದೆ.
* ಎಂ.ಎಸ್.ವಿ.ಬಿ–ಬೈಯಪ್ಪನಹಳ್ಳಿ, ಹುಬ್ಬಳ್ಳಿ ಹಾಗೂ ಥಣಿಸಂದ್ರ ಡಿಪೋಗಳ ನಿರ್ಮಾಣಕ್ಕೆ ಒಟ್ಟು ₹619.55 ಕೋಟಿ ಅನುದಾನ ಮಂಜೂರಾಗಿದೆ. ಪ್ರಸ್ತುತ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಿ 2027ರ ಆಗಸ್ಟ್‌ಗೆ ಪೂರ್ಣಗೊಳ್ಳಲಿದೆ.
* ಎಂ.ಎಸ್.ವಿ.ಬಿ–ಬೈಯಪ್ಪನಹಳ್ಳಿ ಡಿಪೊದಲ್ಲಿ ಪಿಟ್ ಲೈನ್‌ಗಳ (ದುರಸ್ತಿ ರೈಲುಗಳ ನಿಲುಗಡೆಗಾಗಿ ಟ್ರ್ಯಾಕ್) ನಿರ್ಮಾಣ ಹಾಗೂ ಮೆಮೊ ಶೆಡ್ ವಿಸ್ತರಣೆ ಮಾಡಲಾಗುವುದು. ಹುಬ್ಬಳ್ಳಿ ಡಿಪೊದಲ್ಲಿ 3 ಬೇ ಲೈನ್‌ಗಳ ನಿರ್ಮಾಣ, ವಾಶಿಂಗ್ ಲೈನ್ ಹಾಗೂ ಭಾರಿ ರಿಪೇರಿ ಶೆಡ್ ನಿರ್ಮಾಣ ನಡೆಯಲಿದೆ.
* ‘ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಪ್ರತ್ಯೇಕ ಡಿಪೊ ಬೇಕು. ಬೆಂಗಳೂರಿನಲ್ಲಿ ಈಗಾಗಲೇ ಹಲವು ರೈಲುಗಳ ದುರಸ್ತಿ ನಡೆದಿದೆ. ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೂರು ಕಡೆ ಪ್ರತ್ಯೇಕ ಡಿಪೊ ನಿರ್ಮಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.
ವಂದೇ ಭಾರತ್ ರೈಲು ನಿರ್ವಹಣೆಗೆ ಮೂರು ಪ್ರತ್ಯೇಕ್ ಡಿಪೋ
Published by Jyoti Angadi
24 ಏಪ್ರಿಲ್ 2025