* ಶ್ರೀಲಂಕಾ ಮೂಲದ ಬರಹಗಾರ ವಜ್ರ ಚಂದ್ರಶೇಖರ್ ಅವರು ತಮ್ಮ ಅತ್ಯಂತ ಮೆಚ್ಚುಗೆ ಪಡೆದ “Rakesfall” ಕಾದಂಬರಿಗಾಗಿ ಪ್ರಸಿದ್ಧ Ursula K. Le Guin Prize for Fiction 2025 ಅನ್ನು ಗೆದ್ದಿದ್ದಾರೆ. ಈ ಗೌರವವು ಪ್ರತಿ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನ, ಕಲ್ಪನೆ, ಮಾನವೀಯತೆ ಮತ್ತು ಜಗತ್ತಿನೆದುರಿಗೆ ಹೊಸ ಚಿಂತನೆಗಳನ್ನು ಪರಿಚಯಿಸುವ ಕೃತಿಗಳಿಗೆ ಪ್ರದಾನ ಮಾಡಲಾಗುತ್ತದೆ.
* ಈ ಪ್ರಶಸ್ತಿ ಹೆಸರಾಂತ ಅಮೆರಿಕನ್ ಲೇಖಕಿ ಉರ್ಸುಲಾ ಕೆ. ಲೆ ಗಿನ್ ಅವರ ಸ್ಮರಣಾರ್ಥ ನೀಡಲಾಗುತ್ತದೆ. ವೈಜ್ಞಾನಿಕ / ಕಲ್ಪನಾ ಸಾಹಿತ್ಯ, ಸಾಮಾಜಿಕ ನೈತಿಕತೆ, ಮನವೊಲಿಸುವ ಬರವಣಿಗೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಜಯಶೀಲರಿಗೆ $25,000 (ಸುಮಾರು ₹20.8 ಲಕ್ಷ) ನಗದು ಬಹುಮಾನವೂ ನೀಡಲಾಗುತ್ತದೆ.
* “Rakesfall” ಕಾದಂಬರಿಯ ವೈಶಿಷ್ಟ್ಯತೆಗಳು: ರಾಜಕೀಯ ಅಸ್ಥಿರತೆ, ಜಗತ್ತಿನ ಸಮಕಾಲೀನ ವೈಪರಿತ್ಯಗಳು, ಪರಿವರ್ತಿತ ಮಾನವೀಯ ಮೌಲ್ಯಗಳು, ವಲಸೆ ಜೀವನದ ಸಂಕಷ್ಟ, ಸಾಮಾಜಿಕ ಅಸಮಾನತೆ. ಇವುಗಳನ್ನು ಆಳವಾಗಿ ತೋರುವ ಮೂಲಕ ಓದುಗರಲ್ಲಿ ತೀವ್ರವಾದ ಚಿಂತನೆಗೆ ಕಾರಣವಾಗಿದೆ. ಭವಿಷ್ಯದ ಜಾಗತಿಕ ಸಮಾಜ ಹೇಗಿರಬಹುದು ಎಂಬ ಕಲ್ಪನಾನಿರೂಪಣೆಯೂ ಇದರಲ್ಲಿ ಇದೆ. ಇವರ ಸಾಧನೆ ಮುಂದಿನ ಪೀಳಿಗೆಯ ಬರಹಗಾರರಿಗೆ ಸ್ಫೂರ್ತಿಯಾಗಿದೆ.
ವಜ್ರ ಚಂದ್ರಶೇಖರ್ ಅವರಿಗೆ 2025ರ Ursula K. Le Guin Fiction ಪ್ರಶಸ್ತಿ
Published by Akshata Halli
29 ಅಕ್ಟೋಬರ್ 2025