* ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರನ್ನು ವಿವಾದಕ್ಕೆ ಸಿಲುಕಿಸಿರುವ ವಿವಾದಿತ 'ಮಹಾದೇವ್ ಬುಕ್' ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
* ನವೆಂಬರ್ 5 ರಂದು ಹೊರಡಿಸಿದ ಆದೇಶದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಹದೇವ್ ಬುಕ್ ಮತ್ತು ರೆಡ್ಡಿಅನ್ನಪ್ರೆಸ್ಟೋಪ್ರೊ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ.
* ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯದ (ಇಡಿ) ಶಿಫಾರಸಿನ ಮೇರೆಗೆ ಸಚಿವಾಲಯ ಈ ಕ್ರಮ ಕೈಗೊಂಡಿದೆ.
* ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಮಹದೇವ್ ಆ್ಯಪ್ ಪ್ರವರ್ತಕರಾದ ರವಿ ಉಪ್ಪಳ್ ಮತ್ತು ಸೌರಭ್ ಚಂದ್ರಕರ್ ಅವರು ಯುಎಇಯಿಂದ ನಗದು ಕೊರಿಯರ್ ಮೂಲಕ ರೂ. 508 ಕೋಟಿ ಕಳಿಸಿದರೆಂದು ನವೆಂಬರ್ 03 ರಂದು ಜಾರಿ ನಿರ್ದೇಶನಾಲಯದ (ಇಡಿ) ಆರೋಪಿಸಿತ್ತು.
* ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ವೆಬ್‌ಸೈಟ್ ಅನ್ನು ಮುಚ್ಚಲು ಶಿಫಾರಸು ಮಾಡುವ ಸಂಪೂರ್ಣ ಹಕ್ಕು ಛತ್ತೀಸ್‌ಗಢ ಸರ್ಕಾರಕ್ಕೆ ಇದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ವಿವಾದಿತ ಮಹಾದೇವ್ ಬುಕ್ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ
Published by Bhagya R K
07 ನವೆಂಬರ್ 2023