* ಏಕತೆ ಮತ್ತು ಜಾಗತಿಕ ಸಹಯೋಗಕ್ಕಿರುವ ಭಾರತದ ಬದ್ಧತೆಯನ್ನು ಬಿಂಬಿಸುವ ಸಲುವಾಗಿ 'ವಸುಧೈವ ಕುಟುಂಬಕಂ' ಎಂಬ ಬರಹವಿರುವ ನಾಮಫಲಕವನ್ನು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದೆ.
* ವಿಶ್ವಸಂಸ್ಥೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಅಧ್ಯಕ್ಷರಾದ ಡಾ ವಿನಯ್ ಸಹಸ್ರಬುದ್ಧೆ ಅವರು ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ನಾಮಫಲಕವನ್ನು ಅನಾವರಣಗೊಳಿಸಿದರು.
* ವಸುದೈವ ಕುಟುಂಬಕಂ ಎಂಬ ಪದವನ್ನು ಹಿಂದಿಯಲ್ಲಿ ಮತ್ತು ದಿ ವಲ್ಡರ್ ಈಸ್ ಒನ್ ಫ್ಯಾಮಿಲಿ ಎಂದು ಇಂಗ್ಲಿಷ್‍ನಲ್ಲಿ ಬರೆದಿರುವ ಚಿನ್ನದ ವರ್ಣದ ಫಲಕವು ನಗರದ ಭಾರತದ ಖಾಯಂ ಮಿಷನ್‍ನ ಆವರಣದ ಪ್ರವೇಶದ್ವಾರದ ಗೋಡೆಯಲ್ಲಿ ಬರೆಯಲಾಗಿದೆ.
* ವಸುದೈವ ಕುಟುಂಬಕಂ ಎಂಬ ನಾಮಫಲಕವು 2023 ರ ಭಾರತದ ಜಿ20 ಪ್ರೆಸಿಡೆನ್ಸಿ ವಸುಧೈವ ಕುಟುಂಬಕಂ ಅಥವಾ ಒಂದು ಭೂಮಿ – ಒಂದು ಕುಟುಂಬ – ಒಂದು ಭವಿಷ್ಯ ಎಂಬ ಥೀಮ್ ಅನ್ನು ಅಳವಡಿಸಿಕೊಂಡಿದೆ.
ಶನಿವಾರ, 14 ಅಕ್ಟೋಬರ್ 2023
11:03 ಪೂರ್ವಾಹ್ನ
Daily PDF
ವಿಶ್ವಸಂಸ್ಥೆಯಲ್ಲಿ 'ವಸುಧೈವ ಕುಟುಂಬಕಂ' ನಾಮಫಲಕ ಅನಾವರಣ
Authored by:
Bhagya R K