* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 80ನೇ ಅಧಿವೇಶನವು ಸೆಪ್ಟೆಂಬರ್ 9ರಿಂದ ಆರಂಭವಾಗುತ್ತದೆ. ಉನ್ನತ ಮಟ್ಟದ ಚರ್ಚೆ ಸೆಪ್ಟೆಂಬರ್ 23ರಿಂದ 29ರವರೆಗೆ ನಡೆಯಲಿದೆ.
* ಈ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡುವುದಿಲ್ಲ, ಬದಲಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿನಿಧಿಸಲಿದ್ದಾರೆ.
* 1945ರಲ್ಲಿ ಯುಎನ್‌ಜಿಎ ರಚಿಸಲ್ಪಟ್ಟಿತು. ಇದು ವಿಶ್ವಸಂಸ್ಥೆಯ 193 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಚರ್ಚೆಗೆ ವೇದಿಕೆ ಒದಗಿಸುತ್ತದೆ. ಪ್ರತಿವರ್ಷ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಸಭೆ ಸೇರಿ ಉನ್ನತ ಮಟ್ಟದ ವಿಷಯಾಧರಿತ ಚರ್ಚೆ ನಡೆಸುತ್ತದೆ.
* ಸಾಮಾನ್ಯ ಸಭೆಯ ಜೊತೆಗೆ ತುರ್ತು ಹಾಗೂ ವಿಶೇಷ ಅಧಿವೇಶನಗಳನ್ನು ಕರೆದೊಯ್ಯುವ ಅಧಿಕಾರ ಯುಎನ್‌ಜಿಎಗೆ ಇದೆ. ಇದುವರೆಗೆ 32 ವಿಶೇಷ ಹಾಗೂ 11 ತುರ್ತು ಅಧಿವೇಶನಗಳು ನಡೆದಿವೆ. ಪ್ರಸ್ತುತ ಅಧ್ಯಕ್ಷರಾಗಿ ಫಿಲೆಮಾನ್ ಯಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯ ಕಾರ್ಯಗಳು
- ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಸಲಹೆ ನೀಡುವುದು.
- ವಿಶ್ವಸಂಸ್ಥೆಯ ಬಜೆಟ್ ಪರಿಶೀಲನೆ ಹಾಗೂ ಸದಸ್ಯ ರಾಷ್ಟ್ರಗಳ ಆರ್ಥಿಕ ಮೌಲ್ಯಮಾಪನ.
- ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರ ಆಯ್ಕೆ.
- ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಶಿಫಾರಸು.
* ಅಂತಾರಾಷ್ಟ್ರೀಯ ಕಾನೂನು, ಮಾನವ ಹಕ್ಕುಗಳು, ಆರ್ಥಿಕ, ಸಾಮಾಜಿಕ, ಮಾನವೀಯ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ರಾಷ್ಟ್ರಗಳ ಸಹಕಾರವನ್ನು ಉತ್ತೇಜಿಸುವುದು. ಸದಸ್ಯ ರಾಷ್ಟ್ರಗಳ ನಡುವೆ ಉಂಟಾಗುವ ಗಲಾಟೆಗಳನ್ನು ಶಾಂತಿಯುತವಾಗಿ ಬಗೆಹರಿಸುವುದು.
* ಖಾಯಂ ಸದಸ್ಯರ ಅಸಮ್ಮತಿಯ ಕಾರಣದಿಂದ ಭದ್ರತಾ ಮಂಡಳಿ ನಿರ್ಧಾರ ಕೈಗೊಳ್ಳಲು ವಿಫಲವಾದರೆ, ಶಾಂತಿಭಂಗದ ಸಂದರ್ಭದಲ್ಲಿ ಯುಎನ್‌ಜಿಎ ಕ್ರಮ ಕೈಗೊಳ್ಳಲು ಸಾಧ್ಯ.
ಸೋಮವಾರ, 08 ಸೆಪ್ಟೆಂಬರ್ 2025
12:09 ಅಪರಾಹ್ನ
Daily PDF
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನ
Authored by:
Jyoti Angadi