* ಭಾರತದಲ್ಲಿ 'ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ 'ಪ್ರತಿಯೊಬ್ಬರ ಹಕ್ಕುಗಳ ರಕ್ಷಣೆ ಆಗಲಿದೆ ಹಾಗೂ ಮುಕ್ತ- ನ್ಯಾಯಯುತ ಚುನಾವಣೆ ನಡೆಯಲಿದೆ ಎಂಬ ನಿರೀಕ್ಷೆ ಇದೆ' ಎಂದು ವಿಶ್ವಸಂಸ್ಥೆಯು ತಿಳಿಸಿದೆ.
* ಭಾರತದಲ್ಲಿ ಚುನಾವಣೆಗೆ ಮುನ್ನ ರಾಜಕೀಯ ಅನಿಶ್ಚಿತತೆ ತಲೆದೋರಿದೆ ಎಂಬ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಡುಜಾರಿಕ್ ಅವರು ಮಾರ್ಚ್ 28 ರಂದು (ಗುರುವಾರ) ಪ್ರತಿಕ್ರಿಯೆ ನೀಡಿದರು.
* 'ಚುನಾವಣೆ ನಡೆಯಲಿರುವ ಎಲ್ಲ ದೇಶಗಳಂತೆ ಭಾರತದಲ್ಲಿಯು ಒಂದು ನಾಗರಿಕರ ಹಕ್ಕುಗಳನ್ನೂ ಒಳಗೊಂಡಿರುವಂತೆ ಎಲ್ಲರ ಹಕ್ಕುಗಳ ರಕ್ಷಣೆಯು ಆಗಲಿದೆ ಹಾಗೂ ಪ್ರತಿಯೊಬ್ಬರೂ ಮತ ಹಕ್ಕು ಚಲಾಯಿಸುವಂತಹ ಮುಕ್ತನ್ಯಾಯಸಮ್ಮತವಾದ ವಾತಾವರಣ ನಿರ್ಮಾಣ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿದೆ' ಎಂದು ಪ್ರತಿಕ್ರಿಯಿಸಿದರು.
* ಕೇಜ್ರಿವಾಲ್ ಅವರ ಬಂಧನ ಹಾಗೂ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಜಪ್ತಿ ಕುರಿತಂತೆ ಅಮೆರಿಕವು ತನ್ನ ನಿಲುವು ಪುನರುಚ್ಚರಿಸಿದ ಹಿಂದೆಯೇ ವಿಶ್ವಸಂಸ್ಥೆ ಕೂಡ ಅದೇ ಧಾಟಿಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
* ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ ಸರ್ಕಾರ ಆ ದೇಶದ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆ ದಾಖಲಿಸಿತ್ತು. ಕೇಜ್ರಿವಾಲ್ ಪ್ರಕರಣದಲ್ಲಿ ಕಾಲಮಿತಿ ವಿಚಾರಣೆ ಹಾಗೂ ನ್ಯಾಯಯುತ ಚುನಾವಣೆ ಬಗ್ಗೆ ನಿಲುವು ಪ್ರತಿಪಾದಿಸಿತ್ತು.
* 'ಭಾರತದ ಚುನಾವಣೆ ಮತ್ತು ಕಾನೂನು ಪ್ರಕ್ರಿಯೆ ಕುರಿತಂತೆ ಹೊರಗಿನವರ ಅಭಿಪ್ರಾಯ ಮತ್ತು ಅಪಾದನೆ ಅನಪೇಕ್ಷಿತ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದರು.
ಶನಿವಾರ, 30 ಮಾರ್ಚ್ 2024
3:34 ಅಪರಾಹ್ನ
Daily PDF
ವಿಶ್ವಸಂಸ್ಥೆ : ಭಾರತದಲ್ಲಿ ನ್ಯಾಯಯುತ ಚುನಾವಣೆ ನಡೆಯುವ ನಿರೀಕ್ಷೆ
Authored by:
Akshata Halli