* ಪುಟ್ ಬಾಲ ಆಟಗಾರ ಮತ್ತು ಕೋಚ್ ಆಗಿ ನಾಲ್ಕು ಸಲ ವಿಶ್ವ ಕಪ್ ಟೂರ್ನಿ ಗೆದ್ದ ಬ್ರೆಜಿಲ್ ತಂಡದ ದಿಗ್ಗಜ 92 ವರ್ಷ ವಯಸ್ಸಿನ ಮಾರಿಯೊ ಝಗಾಲೊ ಅವರು ನಿಧನರಾಗಿದ್ದಾರೆ ಎಂದು ಜನವರಿ 06 ರಂದು ಪ್ರಕಟಿಸಲಾಗಿದೆ.
* 1958ರಲ್ಲಿ ಬ್ರೆಜಿಲ್ ತಂಡ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಅವರು ಆಡಿದ್ದರು. ನಾಲ್ಕು ವರ್ಷಗಳ ನಂತರ ಚಿಲಿಯಲ್ಲಿ ನಡೆದ ವಿಶ್ವಕಪ್‌ನಲ್ಲೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು.
* 1970 ರಲ್ಲಿ ಮಾರಿಯೊ ಝಗಾಲೊ ಅವರು ತಂಡದ ತರಬೇತುದಾರನಾಗಿದ್ದರು. ಆ ತಂಡದಲ್ಲಿ ಘಟಾನುಘಟಿ ಆಟಗಾರರಾದ ಪೆಲೆ, ಜೈರ್ಝೀನೊ, ರಿವೆಲಿನೊ ಮತ್ತು ಟೊಸ್ಟಾವೊ ಮೊದಲಾದವರು ಆಟಗಾರರು ಆಡಿದ್ದರು, ಇದನ್ನು ಸಾರ್ವಕಾಲಿಕ ಶ್ರೇಷ್ಠ ತಂಡವೆಂದು ಪರಿಗಣಿಸಲಾಗಿದೆ.
* ಈ ತಂಡ ಮೂರನೇ ಬಾರಿ ಬ್ರೆಜಿಲ್‌ಗೆ ವಿಶ್ವಕಪ್ ಗೆದ್ದುಕೊಟ್ಟಿತ್ತು. ಆಟಗಾರ ಮತ್ತು ಮ್ಯಾನೇಜರ್ ಆಗಿ ವಿಶ್ವಕಪ್ ಗೆದ್ದ ಮೊದಲ ಆಟಗಾರನೆಂಬ ಶ್ರೇಯಾಂಕ ಮಾರಿಯೊ ಝಗಾಲೊ ಅವರದಾಗಿತ್ತು.
* 1994 ರ ಅಟ್ಲಾಂಟಾ (ಅಮೆರಿಕ) ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ನಾಲ್ಕನೇ ಬಾರಿ ಚಾಂಪಿಯನ್ ಅದಾಗ ಮಾರಿಯೊ ಅವರು ಸಹಾಯಕ ಕೋಚ್ ಆಗಿದ್ದರು. 'ಓಲ್ಡ್ ವೂಲ್ಸ್' (ಹಿರಿ ತೋಳ) ಎಂಬ ಅಡ್ಡಹೆಸರು ಅವರಿಗಿತ್ತು. 2006ರಲ್ಲಿ ಫುಟ್‌ಬಾಲ್ ಕ್ಷೇತ್ರಕ್ಕೆ ನಿವೃತ್ತಿ ಹೇಳಿದ್ದರು.
ವಿಶ್ವಕಪ್ ಗೆದ್ದ ತಂಡದ ಆಟಗಾರ : ಪುಟ್ ಬಾಲ್ ದಿಗ್ಗಜ ಮಾರಿಯೋ ಝಗಾಲೊ ನಿಧನ
Published by Bhagya R K
08 ಜನವರಿ 2024