* ಕ್ಯೂಎಸ್ ಗ್ಲೋಬಲ್ ರ‍್ಯಾಂಕಿಂಗ್‌ನಲ್ಲಿ ಮೂವರು ಭಾರತೀಯ ಐಐಎಂಗಳು ವಿಶ್ವದ ಟಾಪ್ 100 ಬ್ಯುಸಿನೆಸ್ ಸ್ಕೂಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
* ಬೆಂಗಳೂರಿನ ಐಐಎಂಗೆ 52ನೇ ಸ್ಥಾನ, ಅಹಮದಾಬಾದ್ ಐಐಎಂಗೆ 58ನೇ ಹಾಗೂ ಕಲ್ಕತ್ತಾದ ಐಐಎಂಗೆ 64ನೇ ಸ್ಥಾನ ದೊರಕಿದೆ.
* ಈ ರ‍್ಯಾಂಕಿಂಗ್‌ನಲ್ಲಿ 80 ದೇಶಗಳ 390ಕ್ಕೂ ಹೆಚ್ಚು ಮ್ಯಾನೇಜ್‌ಮೆಂಟ್ ಸಂಸ್ಥೆಗಳನ್ನು ಪರಿಗಣಿಸಲಾಗಿದೆ. ವಾಕ್ಸೆನ್ ಸ್ಕೂಲ್ ಆಫ್ ಬ್ಯುಸಿನೆಸ್ 26ನೇ ಸ್ಥಾನ ಪಡೆದು, ಏಷ್ಯಾದ ನಂ.1 ಮ್ಯಾನೇಜ್‌ಮೆಂಟ್ ಸಂಸ್ಥೆಯಾಗಿ ಹೊರಹೊಮ್ಮಿದೆ.
* ಅಮೆರಿಕದ ಬ್ಯುಸಿನೆಸ್ ಸ್ಕೂಲ್‌ಗಳು ಸದಾ ಅಗ್ರ ಸ್ಥಾನಗಳನ್ನು ಕಾಪಾಡಿಕೊಂಡಿವೆ. ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್ 5 ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೇರಿದೆ.
* ಭಾರತದ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ.
ಶುಕ್ರವಾರ, 19 ಸೆಪ್ಟೆಂಬರ್ 2025
9:17 ಪೂರ್ವಾಹ್ನ
Daily PDF
ವಿಶ್ವದ ಟಾಪ್ 100 ಬ್ಯುಸಿನೆಸ್ ಸ್ಕೂಲ್ ಪಟ್ಟಿಯಲ್ಲಿ ಬೆಂಗಳೂರಿನ ಐಐಎಂ
Authored by:
Jyoti Angadi