* ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ನವೆಂಬರ್ 05 ರಂದು (ಮಂಗಳವಾರ) ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಈ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯ ವರದಿಯಾಗಿದೆ.
* ಲಿಗ್ನೋಸ್ಯಾಟ್ ಎಂದು ಹೆಸರಿಸಲಾದ ಬಾಕ್ಸ್ ತರಹದ ಪ್ರಾಯೋಗಿಕ ಉಪಗ್ರಹದ ಪ್ರತಿಯೊಂದು ಬದಿಯು ಕೇವಲ 10 ಸೆಂಟಿಮೀಟರ್‌ಗಳನ್ನು (ನಾಲ್ಕು ಇಂಚುಗಳು) ಅಳತೆ ಮಾಡುತ್ತದೆ.
* ಮರ ಎಂಬುದಕ್ಕೆ ಲ್ಯಾಟಿನ್ ಭಾಷೆಯಲ್ಲಿರುವ ಪದವನ್ನು ಬಳಸಿ 'ಲಿಗ್ನೋಸ್ಯಾಟ್' ಎಂಬ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ. ಕ್ಯೋಟೊ ವಿಶ್ವವಿದ್ಯಾಲಯ ಹಾಗೂ ಸುಮಿಟೊಮೊ ಫಾರೆಸ್ಟರಿ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
* ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮಾನವ ರಹಿತ ರಾಕೆಟ್‌ನಲ್ಲಿ ಇದನ್ನು ಉಡಾವಣೆ ಮಾಡಲಾಯಿತು ಎಂದು ಕ್ಯೋಟೋ ವಿಶ್ವವಿದ್ಯಾಲಯದ ಬಾಹ್ಯಾಕಾಶ ಕೇಂದ್ರ ತಿಳಿಸಿದೆ. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ಒದಗಿಸಿದ ವಿಶೇಷ ಕಂಟೇನರ್‌ನಲ್ಲಿ ಸ್ಥಾಪಿಸಲಾಗಿದೆ.
* ಸ್ಪೇಸ್‌ಎಕ್ಸ್ ಮೂಲಕ ಈ ಮರದ ಉಪಗ್ರಹವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ನಂತರ ಇದನ್ನು ಭೂಮಿಯಿಂದ 400 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಸೇರಿಸಲು ಸಂಶೋಧಕರು ಯೋಜನೆ ರೂಪಿಸಿದ್ದಾರೆ.
* ಬಾಹ್ಯಾಕಾಶದಲ್ಲಿ ವಾಸಿಸಲು ಮನೆಯ ನಿರ್ಮಾಣಕ್ಕೆ ಅಗತ್ಯವಿರುವ ಮರದಿಂದ ಉಪಗ್ರಹ ನಿರ್ಮಿಸಲಾಗಿದೆ. ಗಗನಯಾನಿಗಳು ನೌಕೆಯ ಮೂಲಕ ಬಾಹ್ಯಾಕಾಶ ತಲುಪಿ ಮನುಷ್ಯನ ಇರುವಿಕೆಯ ಸಾಧ್ಯತೆ ಕುರಿತು ಕ್ಯೋಟೊ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದೆ.
* ಚಂದ್ರ ಹಾಗೂ ಮಂಗಳನ ಅಂಗಳದಲ್ಲಿ ಗಿಡಗಳನ್ನು ನೆಟ್ಟು, ಮರದ ಮನೆಗಳನ್ನು ನಿರ್ಮಿಸುವ 50 ವರ್ಷಗಳ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
* '1900ರಲ್ಲಿ ವಿಮಾನವನ್ನು ಮರದಿಂದ ನಿರ್ಮಿಸಲಾಗಿತ್ತು. ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದ ಕಾರಣ ಮರವು ಭೂಮಿಗಿಂತ ಹೆಚ್ಚು ದೀರ್ಘ ಕಾಲ ಬಾಳುವ ಸಾಮರ್ಥ್ಯ ಹೊಂದಿದೆ.
* ಮರದ ಉಪಗ್ರಹಗಳ ಬಳಕೆ ಕಾರ್ಯಸಾಧ್ಯ' ಎಂದು ಕ್ಯೋಟೊ ವಿಶ್ವವಿದ್ಯಾಲಯದ ಅರಣ್ಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೊಜಿ ಮುರಾಟಾ ಅವರು ತಿಳಿಸಿದ್ದಾರೆ.
* ಈ ಉಪಗ್ರಹ ಬಳಕೆಗಾಗಿ ಜಪಾನ್‌ನಲ್ಲೇ ಬೆಳೆಯುವ ಮ್ಯಾಗ್ನೋಲಿಯಾ ಹೊನೊಕಿ ಎಂಬ ಮರವನ್ನು ಬಳಸಲಾಗಿದೆ. ಇದನ್ನು ಖಡ್ಗದ ಕವಚಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈಗಾಗಲೇ 10 ತಿಂಗಳು ಬಳಸಲಾಗಿದೆ.
ವಿಶ್ವದ ಮೊದಲ ಮರದ ಉಪಗ್ರಹವನ್ನು ಅಭಿವೃದ್ಧಿಪಡಿಸಿದ ಜಪಾನ್
Published by Bhagya R K
06 ನವೆಂಬರ್ 2024