* ವಿಜ್ಞಾನಿಗಳು ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈರಾಣು ವಿನ್ಯಾಸ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇದು ಇ.ಕೊಲಿ (E. coli) ಬ್ಯಾಕ್ಟೀರಿಯಾವನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ.
* ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯ ಪ್ರಕಾರ, AI ಸಂಪೂರ್ಣ ವಂಶವಾಹಿ (Genome) ರೂಪಿಸಲು ಯಶಸ್ವಿಯಾಗಿದೆ. ಇದು ಭವಿಷ್ಯದಲ್ಲಿ ಎಐ ಆಧಾರಿತ ಜೀವಿಯ ಸೃಷ್ಟಿಗೆ ದಾರಿ ಮಾಡಬಹುದು.
* ‘Evo1’ ಮತ್ತು ‘Evo2’ ಎಂಬ AI ಮಾದರಿಗಳನ್ನು ಬಳಸಿ ವೈರಾಣುವಿನ ಡಿಎನ್‌ಎ ವಿನ್ಯಾಸ ಮಾಡಲಾಯಿತು.
* ಇದರ ಫಲವಾಗಿ 11 ಜೀನ್‌ಗಳುಳ್ಳ 5,386 ನ್ಯೂಕ್ಲಿಯೊಟೈಡ್‌ಗಳ ಡಿಎನ್‌ಎ ಸಿದ್ಧವಾಯಿತು, ಇದು ಆತಿಥೇಯದಲ್ಲಿ ತನ್ನ ಪ್ರತಿರೂಪವನ್ನು ಸೃಷ್ಟಿಸುವ ಶಕ್ತಿ ಹೊಂದಿದೆ.
* AI ಮಾದರಿ 20 ಲಕ್ಷಕ್ಕೂ ಹೆಚ್ಚು ವಂಶವಾಹಿ ಅಧ್ಯಯನ ನಡೆಸಿ, 302 ವೈರಾಣು ವಿನ್ಯಾಸ ನೀಡಿತು. ಪ್ರಯೋಗಾಲಯದಲ್ಲಿ ಅವುಗಳಲ್ಲಿ 16 ವೈರಾಣುಗಳು ಜೀವಂತವಾಗಿ ಇ.ಕೊಲಿಯನ್ನು ಯಶಸ್ವಿಯಾಗಿ ನಾಶಮಾಡಿದವು.
* ಈ ಸಾಧನೆ ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ತೆರೆಯುವ ಸಾಧ್ಯತೆ ಇದೆ. ಹಾಲಿ ಇರುವ ವೈರಾಣುಗಳಿಗೆ ಸಾಧ್ಯವಾಗದ ಕೆಲಸವನ್ನು AI ವಿನ್ಯಾಸಗೊಂಡ ವೈರಾಣುಗಳು ಮಾಡಿ ತೋರಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವಿಶ್ವದ ಮೊದಲ ಎಐ ವೈರಸ್ ಸೃಷ್ಟಿ
Published by Jyoti Angadi
01 ಅಕ್ಟೋಬರ್ 2025