* 2035ರೊಳಗೆ ಭಾರತವನ್ನು ವಿಶ್ವದ 20 ಶೇಕಡಾ ಶೇರ್ ಹೊಂದಿದ ಪ್ರಮುಖ ಕ್ವಾಂಟಮ್ ಕಂಪ್ಯೂಟಿಂಗ್ ಶಕ್ತಿ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಸರ್ಕಾರ ಹೊಂದಿದೆ. ಈ ಗುರಿ ಸಾಧನೆಗೆ ಬೆಂಗಳೂರು ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಆಯ್ಕೆಯಾಗಿದೆ.
* ಕ್ವಾಂಟಮ್ ತಂತ್ರಜ್ಞಾನವು ಭವಿಷ್ಯದ ಗಣಕಯಂತ್ರ ಕ್ರಾಂತಿಯಾಗಿ ಪರಿಗಣಿಸಲ್ಪಟ್ಟಿದ್ದು, ಅದರ ಮೂಲಕ ಅತ್ಯಂತ ವೇಗದ ಗಣನೆ, ಸುರಕ್ಷಿತ ಡೇಟಾ ಸಂವಹನ, ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಮತ್ತು ವಿವಿಧ ವೈಜ್ಞಾನಿಕ ಸಂಶೋಧನೆಗಳಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗಲಿದೆ.
* ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸಹಯೋಗಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೈಜೋಡಿಸಿರುವುದು ಮಹತ್ವದ ಬೆಳವಣಿಗೆ.
ಸೋಮಾಪುರದಲ್ಲಿರುವ ಸಿಟ್ರೋನಿಕ್ಸ್ ಕ್ಯಾಂಪಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ನಿರ್ಮಾಣ ನಡೆಯಲಿದೆ.
* ಈ ಯೋಜನೆಗೆ ಸುಮಾರು ₹6,000 ಕೋಟಿ ರೂಪಾಯಿ ಹೂಡಿಕೆ ನಿರೀಕ್ಷೆಯಿದ್ದು, ಇದು ಭಾರತದಲ್ಲಿ ತಂತ್ರಜ್ಞಾನ ಸಂಶೋಧನೆಗೆ ಬೃಹತ್ ಉತ್ತೇಜನ ನೀಡಲಿದೆ.
* ಈ ಯೋಜನೆಯ ಮೂಲಕ ಭಾರತವು ಕ್ವಾಂಟಮ್ ಕಂಪ್ಯೂಟಿಂಗ್, ಕ್ರಿಪ್ಟೋಗ್ರಫಿ, ನ್ಯಾನೋ ಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವ ಸಾಧಿಸುವ ದಿಸೆಯಲ್ಲಿ ಮುನ್ನಡೆಯುತ್ತಿದೆ.
ಬೆಂಗಳೂರು ಈ ಅಭಿವೃದ್ಧಿಯ ಕೇಂದ್ರವಾಗುವುದರಿಂದ, ನಗರವು "ಇಂಡಿಯಾದ ಸಿಲಿಕಾನ್ ವ್ಯಾಲಿ"ಯಿಂದ "ವಿಶ್ವದ ಕ್ವಾಂಟಮ್ ವ್ಯಾಲಿ" ಆಗುವ ಸಾಧ್ಯತೆಯಿದೆ.