* ಭಾರತವು ಟ್ರಿನಿಟ್ರೊಟಾಲ್ವಿನ್ (TNT) ಗಿಂತ ಎರಡು ಪಟ್ಟು ಮಾರಕವಾದ ಸ್ಫೋಟಕ ವಸ್ತುವನ್ನು ಸೃಷ್ಟಿಸಿದೆ. ಇದಕ್ಕೆ ಸೆಬೆಕ್ಸ್-2 ಎಂದು ಹೆಸರಿಡಲಾಗಿದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಸ್ಫೋಟಕಗಳಲ್ಲಿ ಒಂದಾಗಿದೆ.
* ವರದಿಗಳ ಪ್ರಕಾರ ಇದು ಭಾರತದ ಸ್ಫೋಟಕ ಸಾಮರ್ಥ್ಯದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಬಾಂಬ್ ಗಳು, ಫಿರಂಗಿ ಶೆಲ್ ಗಳು ಮತ್ತು ಸಿಡಿತಲೆಗಳಲ್ಲಿ ಸೆಬೆಕ್ಸ್ -2 ಅನ್ನು ಬಳಸುವುದರಿಂದ ಅವುಗಳ ವಿನಾಶಕಾರಿ ಸಾಮರ್ಥ್ಯವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ. ಹೊಸ ಸ್ಫೋಟಕದ ತೂಕವೂ ತುಂಬಾ ಕಡಿಮೆ. ಸೆಬೆಕ್ಸ್ -2 ಸೂತ್ರೀಕರಣವನ್ನು ಪರೀಕ್ಷೆಯ ನಂತರ ಭಾರತೀಯ ನೌಕಾಪಡೆಯು ಪ್ರಮಾಣೀಕರಿಸಿದೆ.
* ಇದು ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ತಯಾರಿಸಿದೆ. ನಾಗ್ಪುರದ ಸೋಲಾರ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್, ಮೂರು ಹೊಸ ಸ್ಫೋಟಕ ಸೂತ್ರಗಳನ್ನು ಅಭಿವೃದ್ಧಿಪಡಿಸಿದೆ.
* ಸೋಲಾರ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ EEL ಇತರ ಸ್ಫೋಟಕ ಆವಿಷ್ಕಾರಗಳಲ್ಲಿಯೂ ಮುಂದುವರಿಯುತ್ತಿದೆ. ಆರು ತಿಂಗಳೊಳಗೆ TNT ಗಿಂತ 2.3 ಪಟ್ಟು ಹೆಚ್ಚು ಶಕ್ತಿಯುತವಾದ ಸ್ಫೋಟಕವನ್ನು ಪೂರ್ಣಗೊಳಿಸುವ ಹಂತದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ, 03 ಜುಲೈ 2024
8:34 ಪೂರ್ವಾಹ್ನ
Daily PDF
ವಿಶ್ವದ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಸ್ಫೋಟಕ ʻSEBEX 2 ಅಭಿವೃದ್ಧಿಪಡಿಸಿದ ಭಾರತ
Authored by:
Bhagya R K