* ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ಮಂಗಳವಾರ(ಜ.21) ಈ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ.
* ಆಕ್ಸೆಂಚರ್ ಕಂಪನಿ ವಿಶ್ವದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಸತತ ಏಳನೇ ಬಾರಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದು, ಟಿಸಿಎಸ್ ಕಂಪನಿಯು ಸತತ ನಾಲ್ಕನೇ ವರ್ಷವೂ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದೆ.
* ಐ.ಟಿ ಸೇವಾ ವಲಯದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಇನ್ಫೊಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೊ, ಮತ್ತು ಟೆಕ್ ಮಹೀಂದ್ರ ದೇಶದ ಕಂಪನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿವೆ.
* 2025ರಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್ ಅತಿವೇಗವಾಗಿ ಬೆಳೆಯುತ್ತಿರುವ ಐಟಿ ಕಂಪನಿಯಾಗಿದೆ. ಇನ್ಫೊಸಿಸ್ ಕಳೆದ ಐದು ವರ್ಷಗಳಲ್ಲಿ ಅತಿಹೆಚ್ಚು ವಾರ್ಷಿಕ ಬೆಳವಣಿಗೆ ದರ ಹೊಂದಿರುವ ಕಂಪನಿಗಳಲ್ಲಿ ಮೊದಲ ಸ್ಥಾನದಲ್ಲಿದೆ.
* ಒಟ್ಟು ಬ್ರ್ಯಾಂಡ್ ಮೌಲ್ಯದ ಶೇ 40ರಷ್ಟು ಪಾಲು ಹೊಂದಿದ ಅಮೆರಿಕ ಅತಿಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಶೇ 36ರಷ್ಟು ಪಾಲು ಹೊಂದಿರುವ ಭಾರತವು ದ್ವಿತೀಯ ಸ್ಥಾನದಲ್ಲಿದೆ.
* ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರದಿಂದ ಕಾರ್ಪೊರೇಟ್ ವೆಚ್ಚ ಪ್ರಮಾಣವು ಕಡಿಮೆಯಾಗಿತ್ತು. ಕೃತಕ ಬುದ್ಧಿಮತ್ತೆ ಮಾರುಕಟ್ಟೆಯ ವಿಸ್ತರಣೆಯಾಗಿದೆ. ಇದರಿಂದ ಐ.ಟಿ ಕಂಪನಿಗಳು ಎ.ಐ ಸಂಬಂಧಿತ ಸೇವೆಗಳನ್ನು ವಿಸ್ತರಿಸಲು ನೆರವು ಪಡೆದಿವೆ ಎಂದು ವರದಿ ತಿಳಿಸಿದೆ.
* ಈ ವರ್ಷ ಐ.ಟಿ. ಕಂಪನಿಗಳು ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತದಿಂದ ಲಾಭ ಪಡೆದಿದ್ದು, ಕಾರ್ಪೊರೇಟ್ ವಲಯದ ಖರ್ಚು ಪ್ರಮಾಣವೂ ಹೆಚ್ಚಾಗಿದೆ.
* ಕಂಪನಿ- ಬ್ರ್ಯಾಂಡ್ ಮೌಲ್ಯ
• ಆಕ್ಸೆಂಚರ್- ₹3.59 ಲಕ್ಷ ಕೋಟಿ
• ಟಿಸಿಎಸ್- ₹1.84 ಲಕ್ಷ ಕೋಟಿ
• ಇನ್ಫೊಸಿಸ್- ₹1.41 ಲಕ್ಷ ಕೋಟಿ
• ಎಚ್‌ಸಿಎಲ್ ಟೆಕ್- ₹77,000 ಕೋಟಿ
• ವಿಪ್ರೊ- ₹52,000 ಕೋಟಿ
• ಟೆಕ್ ಮಹೀಂದ್ರ- 29,000 ಕೋಟಿ
ಬುಧವಾರ, 22 ಜನವರಿ 2025
11:34 ಪೂರ್ವಾಹ್ನ
Daily PDF
ವಿಶ್ವದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಟಿಸಿಎಸ್ಗೆ ಎರಡನೇ ಸ್ಥಾನ
Authored by:
Jyoti Angadi