* ರಿಲಯನ್ಸ್ ಜಿಯೋ ತನ್ನ 5 ಜಿ ಸೇವೆಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಪ್ರಾರಂಭಿಸಿದೆ.
* ಸಿಯಾಚಿನ್ ಹಿಮನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಇದೀಗ ಪಾತ್ರವಾಗಿದೆ. ಹಿಮಾಲಯದ ಕಾರಕೋರಂ ಶ್ರೇಣಿಯಲ್ಲಿ 16,000 ಅಡಿ ಎತ್ತರದಲ್ಲಿ ಈ 5ಜಿ ಸಂಪರ್ಕ ಸಾಧ್ಯವಾಗಿದೆ.
* ರಿಲಯನ್ಸ್ ಜಿಯೊ, ಫಾರ್ವರ್ಡ್ ಪೋಸ್ಟ್‌ನಲ್ಲಿ ಪ್ಲಗ್ ಆ್ಯಂಡ್ ಪ್ಲೇ ಸಾಧನ ಬಳಸಿ 5ಜಿ ಸೇವೆ ನೀಡಿದೆ.
* ಜನವರಿ 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್‌ನಲ್ಲಿ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ.
* 'ಸವಾಲಿನ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದ ನಮ್ಮ ಧೈರ್ಯಶಾಲಿ ಸೈನಿಕರಿಗೆ ಈ ಸಾಧನೆಯನ್ನು ಅರ್ಪಿಸಲಾಗಿದೆ' ಎಂದು ಸೇನೆ ತಿಳಿಸಿದೆ.
* ಸೇನಾ ಸಿಗ್ನಲರ್ಸ್‌ಗಳ ಸಹಾಯದಿಂದ ಕಠಿಣ ಪ್ರದೇಶದಲ್ಲೂ ನೆಟ್‌ವರ್ಕ್ ಪೂರೈಸುವಲ್ಲಿ ರಿಲಾಯನ್ಸ್ ಜಿಯೊ ಯಶಸ್ವಿಯಾಗಿದೆ ಎಂದು ಟೆಲಿಕಾಮ್ ಕಂಪನಿಯ ವಕ್ತಾರರು ಹೇಳಿದ್ದಾರೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಜಿಯೋ 5ಜಿ ಸೇವೆ ಆರಂಭ
Published by Jyoti Angadi
14 ಜನವರಿ 2025