* ಶ್ವಾಸಕೋಶ ಕ್ಯಾನ್ಸರ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಶ್ವಾದ್ಯಂತ ಜನರಿಗೆ ಜಾಗೃತಿ ಮೂಡಿಸಲು ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಂಶೋಧನೆಯ ಮೇಲೆ ಹೆಚ್ಚು ಗಮನಹರಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1ರಂದು ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.
* 2024ರ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಥೀಮ್ :"ಕ್ಲೋಸ್ ದಿ ಕೇರ್ ಗ್ಯಾಪ್: ಎವೆರಿಒನ್ ದೆಸೆರ್ವ್ಸ್ ಆಕ್ಸೆಸ್ ಟು ಕ್ಯಾನ್ಸರ್ ಕೇರ್"
* 'ಫೋರಮ್ ಆಫ್ ಇಂಟರ್ ನ್ಯಾಷನಲ್ ರೆಸ್ಪಿಟರೇಟರಿ ಸೊಸೈಟೀಸ್' ಮತ್ತು 'ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಲಂಗ್ ಕ್ಯಾನ್ಸರ್' ಮೊದಲ ಬಾರಿಗೆ 2012ರಲ್ಲಿ ಈ ಅಭಿಯಾನವನ್ನು ಆರಂಭಿಸಿತು.
* ವೈದ್ಯಕೀಯವಾಗಿ ಶ್ವಾಸಕೋಶ ಕ್ಯಾನ್ಸರ್‌ಗೆ ಧೂಮಪಾನವೇ ಮುಖ್ಯ ಕಾರಣವಾಗಿದೆ. ಆದರೆ ಧೂಮಪಾನ ಸಹವಾಸ ಮಾಡದವರಿಗೂ ಈ ಕ್ಯಾನ್ಸರ್ ಬರಬಹುದು. ವಾಯುಮಾಲಿನ್ಯ, ವಂಶವಾಹಿಯಿಂದಲೂ ಶ್ವಾಸಕೋಶ ಕ್ಯಾನ್ಸರ್ ಬರಬಹುದು ಎನ್ನುತ್ತಾರೆ ವೈದ್ಯರು.
* ಪ್ರತಿ ವರ್ಷ 1.6 ಮಿಲಿಯನ್ ಜನರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಶೇ.15ರಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ತಂಬಾಕು ಬಳಕೆಯ ಇತಿಹಾಸವಿಲ್ಲ ಎಂದು ಸಂಶೋಧನೆ ಹೇಳುತ್ತದೆ.
* ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಭಾರತೀಯರೇ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಮೆಡಿಕಲ್ ಜರ್ನಲ್ 'ದಿ ಲಾನ್ಸೆಟ್' ವರದಿ ಬಹಿರಂಗಪಡಿಸಿದೆ. ವಿವಿಧ ಕ್ಯಾನ್ಸರ್ ಗಳ ಪೈಕಿ ಶ್ವಾಸಕೋಶ ಕ್ಯಾನ್ಸರ್ 3ನೇ ಸ್ಥಾನದಲ್ಲಿದೆ.
* ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ 10 ವರ್ಷಗಳ ಮುಂಚಿತವಾಗಿ ಜನರು ಶ್ವಾಸಕೋಶ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ 54 ರಿಂದ 70 ವಯಸ್ಸಿನ ಜನರು ಈ ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.
* ಮೆಟ್ರೊ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಕಾರಣ ಶ್ವಾಸಕೋಶ ಕ್ಯಾನ್ಸರ್ ಬಾಧಿಸುತ್ತಿದೆ ಎನ್ನುತ್ತಾರೆ ತಜ್ಞರು. ದೇಶದಲ್ಲಿ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುವವರ ಸಂಖ್ಯೆ 2025ರ ವೇಳೆಗೆ 7 ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿ ಎಚ್ಚರಿಸಿದೆ.
* ಅಧ್ಯಯನ ವರದಿ ಪ್ರಕಾರ 2012ರಿಂದ 2016ರ ನಡುವೆ 22,645 ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದಾರೆ. ಈ ಸಂಖ್ಯೆಯು 2025ರ ವೇಳೆಗೆ 1.61 ಲಕ್ಷಕ್ಕೆ ಏರಿಕೆಯಾಗಲಿದೆ.
* ಕರ್ನಾಟಕದಲ್ಲೂ ಶ್ವಾಸಕೋಶದ ಕ್ಯಾನ್ಸರ್ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ರಾಜ್ಯದಲ್ಲಿ 2023ರಲ್ಲಿ 88,873 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 5,272 ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಶೇ.12.05ರಷ್ಟು ಪುರುಷರು ಮತ್ತು ಶೇ.8.9 ರಷ್ಟು ಮಂದಿ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ
Published by Jyoti Angadi
01 ಆಗಸ್ಟ್ 2024