* ರಾಜ್ಯ ಸರ್ಕಾರದ ಶಕ್ತಿ ಯೋಜನೆ ಇದೀಗ ಮತ್ತೊಂದು ಅಂತರರಾಷ್ಟ್ರೀಯ ಮಟ್ಟದ ಗೌರವವನ್ನು ಪಡೆದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ಈ ಯೋಜನೆ International Book of Records – World Record of Excellenceನಲ್ಲಿ ಸ್ಥಾನ ಪಡೆದಿದೆ.
* ಈಗಾಗಲೇ ಇದು Golden Book of World Recordsನಲ್ಲಿ ದಾಖಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದನ್ನು ಹೆಮ್ಮೆಯ ಸಂಗತಿಯೆಂದು ತಿಳಿಸಿದ್ದಾರೆ.
* ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ಮುಖಂಡರಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದರು.
* ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಮತ್ತು ಕೈಗಾರಿಕಾ ದೃಷ್ಟಿಯಿಂದ ಸಬಲರನ್ನಾಗಿಸುವಲ್ಲಿ ಶಕ್ತಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಅನೇಕ ರಾಜ್ಯಗಳು ಅನುಸರಿಸುತ್ತಿರುವುದು ಇದರ ಯಶಸ್ಸಿಗೆ ಸಾಕ್ಷಿ. ಮಹಿಳಾ ಪ್ರಯಾಣಿಕರಿಗೂ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ವ ದಾಖಲೆ ಪಟ್ಟಿಗೆ 'ಶಕ್ತಿ ಯೋಜನೆ'
Published by Jyoti Angadi
02 ಅಕ್ಟೋಬರ್ 2025