* ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ ನಂತರ ಪ್ರಗ್ನಾನಂದ ರಮೇಶಬಾಬು ಅವರು ಭಾರತದ ಹೊಸ ನಂ1 ಚೆಸ್ ಆಟಗಾರ ಆಗಿದ್ದಾರೆ.
* ನೆದರ್‌ಲ್ಯಾಂಡ್‌ನ ವಿಜ್ಕ್ ಆನ್ ಝೀಯಲ್ಲಿ ಜನವರಿ 16 ರಂದು ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ 2024 ಭಾರತದ ಚೆಸ್ ತಾರೆ ಪ್ರಗ್ನಾನಂದ ರಮೇಶಬಾಬು ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಹಾಲಿ ವಿಶ್ವ ಚಾಂಪಿಯನ್ ಅನ್ನು ಸೋಲಿಸಿದ ಎರಡನೇ ಭಾರತೀಯರಾದರು.
* ಈ ಗೆಲುವಿನೊಂದಿಗೆ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಆರ್. ಪ್ರಜ್ಞಾನಂದ ಭಾರತದ ನಂಬರ್ 1 ಚೆಸ್ ಆಟಗಾರ ಎನಿಸಿದ್ದಾರೆ. ಅಗ್ರ ಶ್ರೇಯಾಂಕಿತ ಚೆಸ್ ಪಟುವಾಗಿ ಹೊರಹೊಮ್ಮಿದ್ದಾರೆ. ಚೆನ್ನೈನ 18 ವರ್ಷದ ಆಟಗಾರ ಆನಂದ್ ನಂತರ ಹಾಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಎರಡನೇ ಭಾರತೀಯ.
* ಡಿಂಗ್ ಲಿರೆನ್ ಅವರ ವಿರುದ್ಧದ ಈ ಐತಿಹಾಸಿಕ ಗೆಲುವಿನೊಂದಿಗೆ ಆರ್. ಪ್ರಜ್ಞಾನಂದ FIDE ರ್‍ಯಾಂಕಿಂಗ್‌ನಲ್ಲಿ ಭಾರತದ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ.
* ಆನಂದ್ ಅವರು ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ 2748 ರೇಟಿಂಗ್ನಲ್ಲಿದ್ದಾರೆ. ಪ್ರಜ್ಞಾನಂದ 2748.3 ಆನಂದ್‌ವರಿಗಿಂತ 0.3 ಹೆಚ್ಚು ರೇಟಿಂಗ್‌ನೊಂದಿಗೆ ಮೇಲೇರಿದ್ದಾರೆ.
* ವಿದಿತ್ ಗುಜರಾತಿ ನಾಲ್ಕು ಡ್ರಾಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ ಮತ್ತು ಗುಕೇಶ್ ದೊಮ್ಮರಾಜು ಎರಡು ಸೋಲುಗಳೊಂದಿಗೆ ಗೆಲುವು ಮತ್ತು ಡ್ರಾದೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ. ಕೆನಡಾದ ಟೊರೊಂಟೊದಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ಅಭ್ಯರ್ಥಿಗಳ ಈವೆಂಟ್‌ಗೆ ಗುಜರಾತಿ ಮತ್ತು ಗುಕೇಶ್ ಇಬ್ಬರೂ ಅರ್ಹತೆ ಪಡೆದಿದ್ದಾರೆ.
ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ ನಂ.1 ಭಾರತೀಯ ಚೆಸ್ ಆಟಗಾರನಾದ ಪ್ರಗ್ನಾನಂದ
Published by Bhagya R K
18 ಜನವರಿ 2024