* ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ವಜಾಗೊಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
* ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ದೊರೆಯುವ ಕೊನೆಯ ಅವಕಾಶವೂ ಆಗಸ್ಟ್ 07 ರಂದು (ಬುಧವಾರ) ಕಮರಿತು.
* ಮಹಿಳೆಯರ 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ವಿನೇಶ್ ಫೋಗಟ್ ಅವರು ಬೆಳ್ಳಿ ಪದಕ ಕಳೆದುಕೊಂಡರು.
* ಅದಕ್ಕಾಗಿ ಫೋಗಟ್ ಅವರು ತಾವು ಸೆಮಿಫೈನಲ್ ಜಯಿಸುವವರೆಗೂ ತೂಕದ ನಿರ್ವಹಣೆ ನಿಯಮಬದ್ಧವಾಗಿತ್ತು. ಆದ್ದರಿಂದ ಕನಿಷ್ಠ ಬೆಳ್ಳಿ ಪದಕ ನೀಡಬೆಕು ಎಂದು ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಬುಧವಾರ ಈ ಮೇಲ್ಮನವಿಯನ್ನು ವಜಾಮಾಡಿರುವುದಾಗಿ ಮಂಡಳಿಯು ಪ್ರಕಟಿಸಿದೆ.
* ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು.
* ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಅವರು ಆಗಸ್ಟ್.9 ರಂದು ಮೇಲ್ಮನವಿ ಸಲ್ಲಿಸಿದ್ದರು.
* ವಾದ, ಪ್ರತಿವಾದ ಆಲಿಸಿದ್ದ ಮಂಡಳಿಯು ಇದೇ ಆಗಸ್ಟ್ 16ರಂದು ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ ಎರಡು ದಿನಗಳ ಮುನ್ನವೇ ನಿರ್ಣಯ ಪ್ರಕಟಿಸಿದೆ.
ಗುರುವಾರ, 15 ಆಗಸ್ಟ್ 2024
10:40 ಪೂರ್ವಾಹ್ನ
Daily PDF
ವಿನೇಶ್ ಫೋಗಟ್ ಅರ್ಜಿ ವಜಾ: ಕೈಗೂಡದ ಬೆಳ್ಳಿ ಪದಕ
Authored by:
Bhagya R K