➤ ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಮುಖ ಆಡಳಿತಾತ್ಮಕ ಬದಲಾವಣೆಗಳಾಗಿದ್ದು, ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ (LG) ಆಗಿದ್ದ ಕವಿಂದರ್ ಗುಪ್ತಾ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ. 
➤ ಕವಿಂದರ್ ಗುಪ್ತಾ ಅವರ ಅಧಿಕಾರಾವಧಿ ಮತ್ತು ಹಿನ್ನೆಲೆ: ಕವಿಂದರ್ ಗುಪ್ತಾ ಅವರು ಜುಲೈ 14, 2025 ರಂದು ಲಡಾಖ್‌ನ ಮೂರನೇ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರ ಅಧಿಕಾರಾವಧಿಯು ಲಡಾಖ್ ಇತಿಹಾಸದಲ್ಲೇ ಅತ್ಯಂತ ಕಠಿಣ ಸಮಯವಾಗಿತ್ತು. ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ 6ನೇ ಅನುಸೂಚಿ (6th Schedule) ಅಡಿಯಲ್ಲಿ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಸೆಪ್ಟೆಂಬರ್ 2025ರಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಸೋನಮ್ ವಾಂಗ್ಚುಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
➤ ವಿನಯ್ ಕುಮಾರ್ ಸಕ್ಸೇನಾ ಅವರ ನೇಮಕ: ದೆಹಲಿಯಂತಹ ಸಂಕೀರ್ಣ ಕೇಂದ್ರಾಡಳಿತ ಪ್ರದೇಶದಲ್ಲಿ ಆಡಳಿತ ನಡೆಸಿದ ಅನುಭವ ಹೊಂದಿರುವ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಲಡಾಖ್ ಜವಾಬ್ದಾರಿ ನೀಡಲಾಗಿದೆ. ಲಡಾಖ್‌ನ ಪ್ರಸ್ತುತ ರಾಜಕೀಯ ಅಸ್ಥಿರತೆ, ರಾಜ್ಯತ್ವದ ಬೇಡಿಕೆ ಮತ್ತು ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಅವರ ಅನುಭವ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
➤ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತ ಮಾಹಿತಿ:
ಲಡಾಖ್ ಕೇಂದ್ರಾಡಳಿತ ಪ್ರದೇಶ ಸ್ಥಾಪನೆ: ಅಕ್ಟೋಬರ್ 31, 2019 (ಜಮ್ಮು ಮತ್ತು ಕಾಶ್ಮೀರ ಪುನರ್ರಚನಾ ಕಾಯ್ದೆ, 2019)
ಲಡಾಖ್‌ನ ಮೊದಲ LG: ಆರ್.ಕೆ.
ಆರ್.ಕೆ. ಮಾಥುರ್
ಲಡಾಖ್‌ನ ಎರಡನೇ LG: ಬ್ರಿಗೇಡಿಯರ್ ಬಿ.ಡಿ. ಮಿಶ್ರಾ
ಪ್ರಸ್ತುತ LG (2026): ವಿನಯ್ ಕುಮಾರ್ ಸಕ್ಸೇನಾ
ಲಡಾಖ್‌ನ ಬೇಡಿಕೆಗಳು: ಪೂರ್ಣ ರಾಜ್ಯದ ಸ್ಥಾನಮಾನ ಮತ್ತು 6ನೇ ಅನುಸೂಚಿ ಅಡಿ ರಕ್ಷಣೆ
ಸಂವಿಧಾನದ 6ನೇ ಅನುಸೂಚಿ: ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದೆ.

➤ ಇತರ ಪ್ರಮುಖ ನೇಮಕಾತಿಗಳು: ಲಡಾಖ್ ಮಾತ್ರವಲ್ಲದೆ, ರಾಷ್ಟ್ರಪತಿಯವರು ಇನ್ನುಳಿದ ಕೆಲವು ರಾಜ್ಯಗಳ ರಾಜ್ಯಪಾಲರನ್ನು ಬದಲಾಯಿಸಿದ್ದಾರೆ:
ನೂತನ ರಾಜ್ಯಪಾಲರ ಹೆಸರು: ಪ್ರಸ್ತುತ ನೇಮಕವಾಗಿರುವ ರಾಜ್ಯ/ಪ್ರದೇಶಹಿಂದಿನ ಹುದ್ದೆ / ಹಿನ್ನೆಲೆ
1. ಜಿಷ್ಣು ದೇವ್ ವರ್ಮಾ: ಮಹಾರಾಷ್ಟ್ರದ ರಾಜ್ಯಪಾಲರು: ತೆಲಂಗಾಣದ ರಾಜ್ಯಪಾಲರು
2. ಶಿವ ಪ್ರತಾಪ್ ಶುಕ್ಲಾ: ತೆಲಂಗಾಣದ ರಾಜ್ಯಪಾಲರು: ಹಿಮಾಚಲ ಪ್ರದೇಶದ ರಾಜ್ಯಪಾಲರು
3. ತರಂಜಿತ್ ಸಿಂಗ್ ಸಂಧು: ದೆಹಲಿಯ ಲೆಫ್ಟಿನೆಂಟ್ ಗವರ್ನರ್ : ಅಮೆರಿಕದ ಮಾಜಿ ರಾಯಭಾರಿ
4. ವಿನಯ್ ಕುಮಾರ್ ಸಕ್ಸೇನಾ: ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್: ದೇಹಲಿಯ ಲೆಫ್ಟಿನೆಂಟ್ ಗವರ್ನರ್ 
5. ಆರ್. ಎನ್. ರವಿ: ಪಶ್ಚಿಮ ಬಂಗಾಳದ ರಾಜ್ಯಪಾಲರು: ತಮಿಳುನಾಡಿನ ರಾಜ್ಯಪಾಲರು
6. ರಾಜೇಂದ್ರ ವಿಶ್ವನಾಥ್ ಅರ್ಲೇಕರ್: ತಮಿಳುನಾಡಿನ ರಾಜ್ಯಪಾಲರು (ಹೆಚ್ಚುವರಿ ಹೊಣೆ): ಕೇರಳದ ರಾಜ್ಯಪಾಲರು
7. ಲೆ. ಜ. (ನಿವೃತ್ತ) ಸೈಯದ್ ಅತಾ ಹಸ್ನೈನ್: ಬಿಹಾರದ ರಾಜ್ಯಪಾಲರು :ಭದ್ರತಾ ತಜ್ಞರು / ನಿವೃತ್ತ ಸೇನಾಧಿಕಾರಿ
8. ನಂದ ಕಿಶೋರ್ ಯಾದವ್: ನಾಗಾಲ್ಯಾಂಡ್ ರಾಜ್ಯಪಾಲರು: ಹಿರಿಯ ರಾಜಕೀಯ ನಾಯಕ
9. ಕವೀಂದರ್ ಗುಪ್ತಾ: ಹಿಮಾಚಲ ಪ್ರದೇಶದ ರಾಜ್ಯಪಾಲರು : ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್