* QS (Quacquarelli Symonds) ಸಂಸ್ಥೆ ಬಿಡುಗಡೆ ಮಾಡಿದ Asia University Rankings 2026 ಪಟ್ಟಿಯಲ್ಲಿ ಈ ಬಾರಿ ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಭಾರತದ IITಗಳು ಮತ್ತು ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾನಗಳು ಕಡಿಮೆಯಾಗಿರುವುದು ಗಮನ ಸೆಳೆದಿದೆ.
* ಚೀನಾ ಮತ್ತು ಸಿಂಗಾಪುರ್ ದೇಶಗಳ ವಿಶ್ವವಿದ್ಯಾಲಯಗಳು ಉತ್ತಮ ಸಾಧನೆ ತೋರಿರುವುದು ಗಮನಾರ್ಹವಾಗಿದೆ. ಈ ಬದಲಾವಣೆಗಳು ಏಷ್ಯಾದ ಉನ್ನತ ಶಿಕ್ಷಣ ಕ್ಷೇತ್ರದ ಜಾಗತಿಕ ಸ್ಪರ್ಧೆಯನ್ನು ತೋರಿಸುತ್ತವೆ.
* ಚೀನಾ ಮತ್ತು ಸಿಂಗಪೋರ್ ದೇಶಗಳ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿವೆ. ಚೀನಾದ ಮಹಾವಿದ್ಯಾಲಯಗಳು ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹೂಡಿಕೆ ಹೆಚ್ಚಿಸಿದ್ದರಿಂದ ಜಾಗತಿಕ ಮಾನ್ಯತೆ ಪಡೆದುಕೊಂಡಿವೆ.
* ಸಿಂಗಪೋರ್ ದೇಶದಲ್ಲಿ ಸರ್ಕಾರವು ಶಿಕ್ಷಣ ವ್ಯವಸ್ಥೆ, ಆವಿಷ್ಕಾರ ಸಂಸ್ಕೃತಿ, ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳಿಗೆ ವಿಶೇಷ ಆದ್ಯತೆ ನೀಡಿರುವುದರಿಂದ ಶಿಕ್ಷಣದ ಗುಣಮಟ್ಟ ಬಹಳ ಉನ್ನತವಾಗಿದೆ.
* ಭಾರತದಿಂದ ಈ ಬಾರಿ ಹೆಚ್ಚಿನ ವಿದ್ಯಾಸಂಸ್ಥೆಗಳು QS Asia ಪಟ್ಟಿಯಲ್ಲಿ ಹೆಸರು ಪಡೆದಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ವಿಸ್ತರಿಸುತ್ತಿದೆ ಎಂಬುದು ಸ್ಪಷ್ಟ. ಆದರೆ Top 50 ಪಟ್ಟಿಯಲ್ಲಿ ಭಾರತದ ಸಂಸ್ಥೆಗಳು ಕಾಣಿಸದೇ ಹೋಗಿರುವುದು ಮುಂದಿನ ವರ್ಷಗಳ ಗುರಿಯನ್ನು ಸ್ಪಷ್ಟಪಡಿಸುತ್ತದೆ.
* QS Asia Rankings 2026 ಪಟ್ಟಿಯು ಏಷ್ಯಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಂಭೀರ ಸ್ಪರ್ಧೆ ನಡೆಯುತ್ತಿದೆ ಎಂದು ತೋರಿಸುತ್ತದೆ. IITಗಳ ರ‍್ಯಾಂಕಿಂಗ್ ಕುಸಿತವು ಭಾರತಕ್ಕೆ ಎಚ್ಚರಿಕೆಯ ಗಂಟೆ. ಸಂಶೋಧನೆ ಮತ್ತು ಜಾಗತಿಕ ಸಂಪರ್ಕ ಹೆಚ್ಚಿಸಿದರೆ ಮಾತ್ರ ಮುಂದಿನ ಪಟ್ಟಿಗಳಲ್ಲಿ ಭಾರತ ತನ್ನ ಸ್ಥಾನವನ್ನು ಬಲಪಡಿಸಬಹುದು.
📉ಭಾರತದ IIT ಸಂಸ್ಥೆಗಳ ಕುಸಿತಕ್ಕೆ ಕಾರಣಗಳು:
- ಸಂಶೋಧನಾ ಪ್ರಕಟಣೆಗಳ ಗುಣಮಟ್ಟದ ಕೊರತೆ,
- ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಅಭಿವೃದ್ದಿಯ ಕೊರತೆ,
- ಸಂಪನ್ಮೂಲಗಳ ಸೀಮಿತತೆ,
- ಪ್ರಾಧ್ಯಾಪಕ-ವಿದ್ಯಾರ್ಥಿ ಅನುಪಾತದಷ್ಟು ಉತ್ತಮವಾಗಿಲ್ಲದಿರುವುದು.
* ಈ ಕಾರಣಗಳಿಂದ IITಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಲಿಕೆ ಮಾಡುವಾಗ ರ‍್ಯಾಂಕಿಂಗ್ ಕುಸಿತ ಸಂಭವಿಸಿದೆ.ಈ ಘಟನೆ ಶಿಕ್ಷಣ ಗುಣಮಟ್ಟ, ಸಂಶೋಧನಾ ಶಕ್ತಿ, ಅಂತಾರಾಷ್ಟ್ರೀಯೀಕರಣ ಏಷ್ಯಾದಲ್ಲಿ ಹೇಗೆ ಬದಲಾವಣೆ ತರುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಬುಧವಾರ, 05 ನವೆಂಬರ್ 2025
3:49 ಅಪರಾಹ್ನ
Daily PDF
ವಿಕಸಿತ ಶಿಕ್ಷಣ ಜಾಲದ ಫಲ: ಚೀನಾ ಮತ್ತು ಸಿಂಗಪೂರ್ ವಿಶ್ವವಿದ್ಯಾಲಯಗಳ ಪ್ರಭುತ್ವ
Authored by:
Akshata Halli