* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಆಗಸ್ಟ್ 24 ರಂದು ಮೂರು ಛತ್ರಿ ಯೋಜನೆಗಳ ಮುಂದುವರಿಕೆಗೆ ಅನುಮೋದನೆ ನೀಡಿದೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) 'ವಿಜ್ಞಾನ ಧಾರಾ' ಎಂಬ ಏಕೀಕೃತ ಕೇಂದ್ರ ವಲಯದ ಯೋಜನೆಗೆ ವಿಲೀನಗೊಂಡಿದೆ.
* 2021-22 ರಿಂದ 2025-26 ರವರೆಗೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಏಕೀಕೃತ ಯೋಜನೆ ‘ವಿಜ್ಞಾನ ಧಾರೆ’ ಅನುಷ್ಠಾನಕ್ಕೆ  ಪ್ರಸ್ತಾವಿತ ವೆಚ್ಚ ರೂ.10,579.84 ಕೋಟಿ.
* 'ವಿಜ್ಞಾನ ಧಾರಾ' ಯೋಜನೆಯು ಈ ಕೆಳಗಿನ ಮೂರು ವಿಶಾಲ ಘಟಕಗಳನ್ನು ಕ್ರೋಢೀಕರಿಸುತ್ತದೆ. 
- ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಂಸ್ಥಿಕ ಮತ್ತು ಮಾನವ ಸಾಮರ್ಥ್ಯ ಅಭಿವೃದ್ಧಿ ( S & T) ;
- ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು
- ಆವಿಷ್ಕಾರ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಿಯೋಜನೆ
* ಮೂಲಭೂತ ಸಂಶೋಧನೆ, ಸುಸ್ಥಿರ ಶಕ್ತಿ, ಜಲಸಂಪನ್ಮೂಲಗಳು, ಅಂತರಾಷ್ಟ್ರೀಯ ಸಹಯೋಗ ಮತ್ತು S&T ಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
* ಯೋಜನೆಗಳನ್ನು ಏಕೀಕೃತ ಯೋಜನೆಗೆ ವಿಲೀನಗೊಳಿಸುವುದು ನಿಧಿಗಳ ಉಪಯೋಗದಲ್ಲಿ ದಕ್ಷತೆಯನ್ನು ಹೆಚ್ಚಿಸಲಿದೆ.