* ಭಾರತದ ಯುಪಿಐ (UPI) ಇದೀಗ ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ವಿಶ್ವದಾದ್ಯಾಂತ ವಹಿವಾಟಿನಲ್ಲಿ ವೀಸಾ ಅನ್ನು ಹಿಂದಿಕ್ಕಿದೆ.
* ಮೇ-ಜೂನ್ 2025ರ ಅವಧಿಯಲ್ಲಿ ಯುಪಿಐ ಪ್ರತಿದಿನ ಸರಾಸರಿ 65 ಕೋಟಿ ವಹಿವಾಟುಗಳನ್ನು ನಡೆಸಿದೆ.
* ವೀಸಾ 200 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಯುಪಿಐ ಕೇವಲ 7 ದೇಶಗಳಲ್ಲಿ ಸಕ್ರಿಯವಾಗಿದ್ದು ಈ ಸಾಧನೆಯು ವಿಶೇಷವಾಗಿದೆ. ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಟ್ವೀಟ್ ಮಾಡಿದ್ದಾರೆ.
* ಭಾರತದಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಮುಂತಾದ ಆ್ಯಪ್ ಗಳ ಮೂಲಕ ಯುಪಿಐ ಸೇವೆ ಲಭ್ಯವಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಜನರು ಇದರ ಬಳಕೆಯಲ್ಲಿ ಮುಂದಿದ್ದಾರೆ.
* ಆಗಸ್ಟ್ 1, 2025ರಿಂದ ಯುಪಿಐ ನಿಯಮಗಳಲ್ಲಿ ಬದಲಾವಣೆ ಜಾರಿಯಲ್ಲಿವೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮಗಳನ್ನು ಪ್ರಕಟಿಸಿದ್ದು, ತಾಂತ್ರಿಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಬ್ಯಾಲೆನ್ಸ್ ಚೆಕ್ ಮತ್ತು ಆಟೋಪೇ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.
ವೀಸಾ ಹಿಂದಿಕ್ಕಿದ ಈಗ ವಿಶ್ವದಲ್ಲೇ ನಂ. 01 ಸ್ಥಾನದಲ್ಲಿ ಯುಪಿಐ
Published by Jyoti Angadi
15 ಜುಲೈ 2025