* ಡಾ: ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ ವತಿಯಿಂದ ಮಲ್ಲಿಕಾರ್ಜುನ ಮನಸೂರ ಅವರ 113 ನೇ ಜನ್ಮ ದಿನ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಸಂಗೀತೋತ್ಸವ ಡಿಸೆಂಬರ್ 31 ರಂದು ನಡೆಯಲಿದೆ.
* ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಪುಣೆಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ವಿದ್ಯಾಧರ ವ್ಯಾಸ್, ರಾಷ್ಟ್ರೀಯ ಯುವ ಪ್ರಶಸ್ತಿಗೆ ಧಾರವಾಡದ ವಾದ್ಯ ಸಂಗೀತಗಾರ ರವಿಕಿರಣ ನಾಕೋಡ ಮತ್ತು ಗದುಗಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ವೆಂಕಟೇಶ ಅಲಕೋಡ ಅವರು ಆಯ್ಕೆಯಾಗಿದ್ದಾರೆ.
* ರಾಷ್ಟ್ರೀಯ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಫಲಕ, ಯುವ ಪ್ರಶಸ್ತಿಯು 25 ಸಾವಿರ ನಗದು ಫಲಕ ಒಳಗೊಂಡಿದೆ.
ವಿದ್ಯಾಧರ ವ್ಯಾಸ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
Published by Bhagya R K
23 ಡಿಸೆಂಬರ್ 2023