* ಅಮೆರಿಕದ ಟ್ರಂಪ್ ಆಡಳಿತವು ವಿದೇಶಿ ವಿದ್ಯಾರ್ಥಿಗಳು (F-ವೀಸಾ) ಹಾಗೂ ಮಾಧ್ಯಮ ಪ್ರತಿನಿಧಿಗಳ (I-ವೀಸಾ) ವೀಸಾ ಅವಧಿಗೆ ಮಿತಿ ಹೇರಲು ಹೊಸ ನಿಯಮವನ್ನು ಪ್ರಸ್ತಾಪಿಸಿದೆ. ಇದರ ಉದ್ದೇಶ ಅಕ್ರಮ ವಲಸೆ ಮತ್ತು ವೀಸಾ ದುರುಪಯೋಗವನ್ನು ತಡೆಯುವುದಾಗಿದೆ ಎಂದು ಡಿಎಚ್‌ಎಸ್ ತಿಳಿಸಿದೆ.
* 1978ರಿಂದ ವಿದ್ಯಾರ್ಥಿಗಳಿಗೆ Duration of Status ಎಂಬ ಸೌಲಭ್ಯ ಇದ್ದು, ಮರುಪರಿಶೀಲನೆ ಇಲ್ಲದೇ ಅಮೆರಿಕಾದಲ್ಲಿ ದೀರ್ಘಾವಧಿ ಉಳಿಯಲು ಅವಕಾಶವಿತ್ತು.
* ಟ್ರಂಪ್ ಆಡಳಿತ ಪ್ರಕಾರ, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡು ನಿರಂತರವಾಗಿ ವಿದ್ಯಾರ್ಥಿಗಳಂತೆ ಉಳಿದಿದ್ದಾರೆ.
* ಹೊಸ ನಿಯಮ ಪ್ರಕಾರ, ವಿದೇಶಿ ವಿದ್ಯಾರ್ಥಿಗಳು ಹಾಗೂ ಎಕ್ಸ್‌ಚೇಂಜ್ ವಿಸಿಟರ್‌ಗಳು ಗರಿಷ್ಠ 4 ವರ್ಷ ಮಾತ್ರ ಉಳಿಯಲು ಅವಕಾಶ ಸಿಗುತ್ತದೆ.
* ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾರಂಭಿಕ ಅವಧಿ 240 ದಿನ, ಅದಾದ ಬಳಿಕ ಮತ್ತೊಂದು 240 ದಿನ ವಿಸ್ತರಣೆ ದೊರೆಯಬಹುದು, ಆದರೆ ಅದು ಅವರ ಕೆಲಸದ ಅವಧಿಯನ್ನು ಮೀರಬಾರದು.
ವಿದೇಶಿ ವಿದ್ಯಾರ್ಥಿ ಹಾಗೂ ಮಾಧ್ಯಮ ವೀಸಾ ಅವಧಿಗೆ ಮಿತಿ ಹೇರಿದ ಟ್ರಂಪ್
Published by Jyoti Angadi
29 ಆಗಸ್ಟ್ 2025