* ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 70,795 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.
* 19059 ಕೋಟಿ ರು. ಹೂಡಿಕೆಯೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಹಾಗೂ ದೇಶೀಯ ವ್ಯಾಪಾರ ಉತ್ತೇಜನಾ ಇಲಾಖೆಯು ಅಂಕಿ -ಅಂಶ ಬಿಡುಗಡೆ ಮಾಡಿದೆ.
* ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಆಗಿರುವ ಹೂಡಿಕೆಯನ್ನು ಗಮನಿಸಿದರೆ 3 ಪಟ್ಟುಗೂ ಕಡಿಮೆ ಹೂಡಿಕೆ ಕರ್ನಾಟಕದಲ್ಲಿ ಆಗಿದೆ.
* ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶಕ್ಕೆ ಬಂದಿರುವ ಒಟ್ಟಾರೆ ಎಫ್ ಡಿಐ ಪೈಕಿ ಶೇ.52ರಷ್ಟು ಮಹಾರಾಷ್ಟ್ರಕ್ಕೇ ಹೋಗಿದೆ.
* ಉಳಿದಂತೆ 10788 ಕೋಟಿ ರು.ಗಳೊಂದಿಗೆ ದೆಹಲಿ 3ನೇ ಸ್ಥಾನದಲ್ಲಿದೆ. 9023 ಕೋಟಿ ರು.ಗಳೊಂದಿಗೆ ತೆಲಂಗಾಣ, 8508 ಕೋಟಿ ರು. ಹೂಡಿಕೆಯೊಂದಿಗೆ ಗುಜರಾತ್ ಕ್ರಮವಾಗಿ 4 ಹಾಗೂ 5ನೇ ಸ್ಥಾನವನ್ನು ಪಡೆದಿವೆ. ಈ ವರ್ಷದ ಏಪ್ರಿಲ್- ಜೂನ್ ಅವಧಿಯಲ್ಲಿ ಆಗಿರುವ ಹೂಡಿಕೆ ಇದಾಗಿದೆ.
* ರಾಜ್ಯ ಹೂಡಿಕೆ ಮೊತ್ತ (ಕೋಟಿ ₹ಗಳಲ್ಲಿ)
1. ಮಹಾರಾಷ್ಟ್ರ 70795
2. ಕರ್ನಾಟಕ 19059
3. ದೆಹಲಿ. 10788
4. ತೆಲಂಗಾಣ 9023
5. ಗುಜರಾತ್ 8508
6. ತಮಿಳುನಾಡು 5818
ಸೋಮವಾರ, 09 ಸೆಪ್ಟೆಂಬರ್ 2024
11:47 ಪೂರ್ವಾಹ್ನ
Daily PDF
ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ ಕರ್ನಾಟಕಕ್ಕೆ 2 ನೇ ಸ್ಥಾನ
Authored by:
Bhagya R K