* ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ಡಾ. ಕೆ. ಸುಧಾಕರ್ ಅವರು ನೇಮಕಗೊಂಡಿದ್ದಾರೆ.
* ಕೇಂದ್ರ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಕೀರ್ತಿವರ್ಧನ್ ಸಿಂಗ್ ಮತ್ತು ಪವಿತ್ರಾ ಮಾರ್ಗರೀಟಾ ಅವರ ನೇತೃತ್ವದ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ 10 ಹಾಗೂ ರಾಜ್ಯಸಭೆಯ 9 ಸದಸ್ಯರು, ರಾಜ್ಯಸಭೆಯಿಂದ ಒಬ್ಬರು ವಿಶೇಷ ಆಹ್ವಾನಿತ ಸದಸ್ಯರು ಮತ್ತು ಇಬ್ಬರು ಮಾಜಿ ಅಧಿಕಾರಿಗಳು ಸದಸ್ಯರಾಗಿದ್ದಾರೆ.
* ಈ ಸಲಹಾ ಸಮಿತಿಯು ಸರ್ಕಾರದ ವಿದೇಶಾಂಗ ನೀತಿ, ವಿವಿಧ ಯೋಜನೆ, ಕಾರ್ಯಕ್ರಮ ಅನುಷ್ಠಾನದ ವಿಧಾನ ಹಾಗೂ ದೇಶದ ವಿದೇಶಾಂಗಕ್ಕೆ ಸಂಬಂಧಿಸಿದ ವಿಚಾರ ಕುರಿತು ಸೂಕ್ತ ಸಲಹೆ, ಸೂಚನೆ ನೀಡಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ಕೆ ಸುಧಾಕರ್ ನೇಮಕ
Published by Bhagya R K
29 ಅಕ್ಟೋಬರ್ 2024