* ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನಾ ಭರ್ಜರಿ ಶತಕ ಸಿಡಿಸಿದ್ದಾರೆ.
* ಆಸ್ಟ್ರೇಲಿಯಾ ಭಾರತಕ್ಕೆ 413 ರನ್‌ಗಳ ಗುರಿಯನ್ನು ನೀಡಿದ್ದು ಮಂಧಾನಾ ಬ್ಯಾಟಿಂಗ್ ಮೂಲಕ ಅದ್ಭುತ ಪ್ರದರ್ಶನ ನೀಡಿದರು.
* ಈ ಪಂದ್ಯದಲ್ಲಿ ಸ್ಮೃತಿ ಮಂಧಾನಾ ಕೇವಲ 50 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರ ವೇಗದ ಏಕದಿನ ಶತಕದ ದಾಖಲೆಯನ್ನು ಮುರಿದರು.
* ಈ ಹಿಂದೆ ಭಾರತದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, 2012-13ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 52 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಒಂದು ದಶಕಕ್ಕೂ ಹೆಚ್ಚು ಕಾಲ ಈ ದಾಖಲೆಯನ್ನು ಹೊಂದಿದ್ದರು.
* ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಬ್ಯಾಟರ್ಗಳು
- ಸ್ಮೃತಿ ಮಂಧಾನ vs ಆಸ್ಟ್ರೇಲಿಯಾ 50 ಎಸೆತಗಳು (2025)
- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ 52 ಎಸೆತಗಳು (2013)
- ವೀರೇಂದ್ರ ಸೆಹ್ವಾಗ್ vs ನ್ಯೂಜಿಲೆಂಡ್ 60 ಎಸೆತಗಳು (2009)
- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ 61 ಎಸೆತಗಳು (2013)
- ಮೊಹಮ್ಮದ್ ಅಜರುದ್ದೀನ್ vs ನ್ಯೂಜಿಲೆಂಡ್ 62 ಎಸೆತಗಳು (1988)
* ಮಹಿಳಾ ಏಕದಿನ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಎಂಬ ಹೆಗ್ಗಳಿಕೆಗೆ ಮಂಧಾನ ಅವರ ಶತಕ ಪಾತ್ರವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ 45 ಎಸೆತಗಳಲ್ಲಿ ಶತಕ ಬಾರಿಸಿದ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
* ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು
15 - ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ)
13 - ಸ್ಮೃತಿ ಮಂಧಾನ (ಭಾರತ)
13 - ಸೂಸಿ ಬೇಟ್ಸ್ (ನ್ಯೂಜಿಲೆಂಡ್)
12 - ಟಾಮಿ ಬ್ಯೂಮಾಂಟ್ (ಇಂಗ್ಲೆಂಡ್)
ಬುಧವಾರ, 24 ಸೆಪ್ಟೆಂಬರ್ 2025
11:22 ಪೂರ್ವಾಹ್ನ
Daily PDF
ವೇಗದ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದ ಸ್ಮೃತಿ ಮಂಧಾನ!
Authored by:
Jyoti Angadi