* ಗಡಿ ಭಾಗದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ, 'ವೈಬ್ರಂಟ್ ವಿಲೇಜಸ್ ಪ್ರೊಗ್ರಾಂ' (VVP) ಯೋಜನೆಯ ಎರಡನೇ ಹಂತಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
* ಈ ಹಂತಕ್ಕೆ ₹6,839 ಕೋಟಿ ಮೀಸಲಿರಿಸಲಾಗಿದೆ. ಮೊದಲ ಹಂತದಲ್ಲಿ ಚೀನಾ ಗಡಿಯ ಹಳ್ಳಿಗಳ ಮೇಲೆ ಗಮನ ಹರಿಸಲಾಗಿದ್ದು, ಎರಡನೇ ಹಂತದಲ್ಲಿ ಈ ಯೋಜನೆ 2028-29ರವರೆಗೆ 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಆಯ್ದ ಹಳ್ಳಿಗಳಿಗೆ ವಿಸ್ತರಿಸಲಾಗುವುದು.
* ಗಡಿಭಾಗದ ಜನಜೀವನದ ಗುಣಮಟ್ಟವನ್ನು ಹೆಚ್ಚಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಗಡಿಭಾಗದಲ್ಲಿ ನಡೆಯುವ ಕಾನೂನುಬಾಹ್ಯ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಈ ಗುರಿಗಳನ್ನು ಸಾಧಿಸಲು ಯೋಜಿಸಲಾಗಿದೆ.
* ಈ ಭಾಗಗಳಲ್ಲಿ ಸರ್ಕ್ಯೂಟ್‌ಗಳ ರೂಪದಲ್ಲಿ ಹಳ್ಳಿಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು.
* ರಸ್ತೆ, ವಿದ್ಯುತ್, ಅಂತಾರಾಷ್ಟ್ರೀಯ ದೂರಸಂಪರ್ಕ, ಹಾಗೂ ಸ್ಮಾರ್ಟ್ ಶಿಕ್ಷಣದಂತಹ ಸೌಲಭ್ಯಗಳನ್ನು ಗಡಿಯ 0-10 ಕಿ.ಮೀ. ಒಳಗಿನ ಹಳ್ಳಿಗಳಲ್ಲಿ ಕಲ್ಪಿಸಲಾಗುವುದು. ಇದಲ್ಲದೆ, ಸ್ಥಳೀಯ ಪರಂಪರೆಯ ಸಮರ್ಪಕ ಸಂರಕ್ಷಣೆಯೂ ಯೋಜನೆಯ ಭಾಗವಾಗಿದೆ.
ಮಂಗಳವಾರ, 08 ಎಪ್ರಿಲ್ 2025
11:37 ಪೂರ್ವಾಹ್ನ
Daily PDF
"ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಮ್" ಗೆ ಅನುಮೋದನೆ
Authored by:
Jyoti Angadi