* ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ (NCAP) ವರದಿ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದರೂ, ವಾಯುಮಾಲಿನ್ಯ ತಡೆಗೆ ಯಶಸ್ವಿ ಪ್ರಯತ್ನಗಳಿಂದ ಇಂದೋರ್ ಅಗ್ರ ಸ್ಥಾನ ಪಡೆದಿದೆ.
* ಪ್ರತಿ ವರ್ಷವು ಎನ್‌ಸಿಎಪಿ ದೇಶದ ಹಲವಾರು ನಗರಗಳ ಗಾಳಿಯ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಈ ಪರಿಶೀಲನೆಗಾಗಿ ನಗರಗಳನ್ನು 10 ಲಕ್ಷಕ್ಕೂ ಅಧಿಕ, 3-10 ಲಕ್ಷ, 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡಿದೆ.
* 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಇಂದೋರ್ ಮೊದಲ ಸ್ಥಾನ, ಮಧ್ಯಪ್ರದೇಶದ ಜಬಲ್‌ಪುರ ಎರಡನೇ ಸ್ಥಾನ, ಉತ್ತರ ಪ್ರದೇಶದ ಆಗ್ರಾ ಮತ್ತು ಸೂರತ್ ಮೂರನೇ ಸ್ಥಾನ ಪಡೆದಿವೆ.
* 3–10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮಹಾರಾಷ್ಟ್ರದ ಅಮರಾವತಿ ಮೊದಲ, ಉತ್ತರ ಪ್ರದೇಶದ ಝಾನ್ಸಿ–ಮೊರಾದಾಬಾದ್ ಎರಡನೇ, ರಾಜಸ್ಥಾನದ ಅಲ್ವರ್ ಮೂರನೇ ಸ್ಥಾನ ಗಳಿಸಿವೆ.
* 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ ಮಧ್ಯಪ್ರದೇಶದ ದೇವಾಸ್ ಮೊದಲ, ಹಿಮಾಚಲ ಪ್ರದೇಶದ ಪರ್ವಾನೋ ಎರಡನೇ ಮತ್ತು ಒಡಿಶಾದ ಅನುಗುಲ್ ಮೂರನೇ ಸ್ಥಾನ ಪಡೆದಿವೆ.
* ಕರ್ನಾಟಕದ ಯಾವುದೇ ನಗರವು ಮೂರೂ ವಿಭಾಗಗಳ ಮೊದಲ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬೆಂಗಳೂರು 31ನೇ ಸ್ಥಾನದಿಂದ 36ನೇ ಸ್ಥಾನಕ್ಕೆ ಕುಸಿದಿದೆ.
* ಕಲವು ನಗರಗಳು ಕೈಗಾರಿಕಾ ಕೇಂದ್ರಗಳಾಗಿವೆ. ಕಲ್ಲಿದ್ದಲು ಗಣಿಗಾರಿಕೆಯನ್ನೂ ಹೊಂದಿವೆ. ಆದರೂ, ವಾಯುಮಾಲಿನ್ಯವನ್ನು ತಡೆಯುವಲ್ಲಿ ಸಫಲವಾಗಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.
ವಾಯು ಮಾಲಿನ್ಯ ತಡೆಗೆ ಪ್ರಯತ್ನದಲ್ಲಿ ಇಂದೋರ್ಗೆ ಅಗ್ರಸ್ಥಾನ
Published by Jyoti Angadi
10 ಸೆಪ್ಟೆಂಬರ್ 2025