* ರಾಜ್ಯದಲ್ಲೇ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಉತ್ತರ ಕನ್ನಡದಲ್ಲಿ ಸಂಭವಿಸುತ್ತಿವೆ ಎಂದು ವರದಿಯಾಗಿವೆ.
* ಕಳೆದ ಎರಡು ವರ್ಷಗಳಲ್ಲಿ 2,598 ಕಡೆಗಳಲ್ಲಿ ಕಾಡಿಗೆ ಬೆಂಕಿ ತಗುಲಿದ ಘಟನೆಗಳು ನಡೆದಿವೆ ಎಂದು ಅರಣ್ಯ ಮತ್ತು ಕೇಂದ್ರ ಪರಿಸರ ಹವಾಮಾನ ಬದಲಾವಣೆ ಸಚಿವಾಲಯವು ಇತ್ತೀಚಿಗೆ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ವರದಿ (ಐಎಸ್‌ಎಫ್) ತಿಳಿಸಿದೆ.
* ದೇಶದ ವಿವಿಧೆಡೆ ನಡೆದ ಕಾಳಿಚ್ಚು ಘಟನೆಗಳ ಅಂಕಿ- ಅಂಶ ಪ್ರಕಟಿಸಿರುವ ಐಎಸ್‌ಎಫ್, 2022-23ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2,162 ಮತ್ತು 2023-24 ಸಾಲಿನಲ್ಲಿ 436 ಕಾಳ್ಳಿಚ್ಚು ಪ್ರಕರಣಗಳು ವರದಿಯಾಗಿರುವುದಾಗಿ ಉಲ್ಲೇಖಿಸಿದೆ.
* ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ ಕಾಡ್ಗಿಚ್ಚು ಘಟನೆಗಳು ಸಂಭವಿಸುತ್ತಿವೆ. ಎರಡು ವರ್ಷಗಳಲ್ಲಿ ಕಾಡ್ಗಿಚ್ಚಿನಿಂದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯುಂಟಾಗಿದೆ.
* 2023ರಲ್ಲಿ ತೀವು ಬರಗಾಲದ ಸ್ಥಿತಿ ಇದ್ದ ಕಾರಣ ಹೆಚ್ಚು ಬೆಂಕಿ ಅವಘಡ ಸಂಭವಿಸಿದೆ. ರಾಜ್ಯದಲ್ಲಿ ಈ ವೇಳೆ 14 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ ಕೆನರಾ ಅರಣ್ಯ ಪ್ರದೇಶದಲ್ಲಿ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಸಂಭವಿಸಿವೆ.
* ಅರೆಮಲೆನಾಡು ಪ್ರದೇಶಗಳಾಗಿರುವ ಹಳಿಯಾಳ, ಮುಂಡಗೋಡ, ಶಿರದಿ ಆಲೂಕಿನ ಗಡಿ ಭಾಗಗಳಲ್ಲಿ ಕುರುಚಲು ಅರಣ್ಯಗಳಿಗೆ ಬೆಂಕಿ ಘಟನೆ ಹಾಗೂ ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ಕಾಡಿಚ್ಚಿನ ಘಟನೆ ಹೆಚ್ಚಿದ್ದರಿಂದ ಪರಿಣಾಮ ಜಿಲ್ಲೆಯ ಮೇಲು ಬೀರಿದೆ.
ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳ ದಾಖಲೆ
Published by Jyoti Angadi
31 ಡಿಸೆಂಬರ್ 2024