* ಉಕ್ರೇನ್ ಪ್ರಾದೇಶಿಕ ಸಮಗ್ರತೆ ಕಾಪಾಡುವಂತೆ ಎರಡು ವರ್ಷಗಳಿಂದ ನಡೆಸುತ್ತಿರುವ 'ಯುದ್ಧ ಕೊನೆಗೊಳಿಸುವ ಯಾವುದೇ ಒಪ್ಪಂದವಿರಬೇಕು ಎಂದು ಸುಮಾರು 80 ದೇಶಗಳು ಜೂನ್ 16 ರಂದು (ಭಾನುವಾರ) ಕರೆ ನೀಡಿವೆ.
* ಬರ್ಗೆನ್ ಸ್ಟಾಕ್ ರೆಸಾರ್ಟ್‌ನಲ್ಲಿ ನಡೆದ ಎರಡು ದಿನಗಳ ಸ್ವಿಸ್ ಶಾಂತಿ ಸಮ್ಮೇಳನದಲ್ಲಿ ಈ ಒಮ್ಮತದ ಕರೆ ನೀಡಲಾಗಿದೆ.
* ರಷ್ಯಾ ಅನುಪಸ್ಥಿತಿಯಲ್ಲಿ ಈ ಕರೆ ಕೊಡುವಲ್ಲಿ ಪ್ರಮುಖ ಅಭಿವೃದ್ಧಿಶೀಲ ದೇಶಗಳಾದ ಭಾರತ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಸಂಯುಕ್ತ ಅರಬ್ ಸಂಸ್ಥಾನ ಸಹಿ ಹಾಕದೇ ಹೊರಗುಳಿದಿವೆ.
* ಈ ಶಾಂತಿ ಸಮ್ಮೇಳನಕ್ಕೆ ರಷ್ಯಾಕ್ಕೆ ಆಹ್ವಾನ ನೀಡಲಾಗಿರಲಿಲ್ಲ. ಆದರೆ ಇದರಲ್ಲಿ ಪಾಲ್ಗೊಂಡಿದ್ದ ಬಹುತೇಕ ದೇಶಗಳ ನಾಯಕರು ರಷ್ಯಾ ಶಾಂತಿ ಒಪ್ಪಂದಕ್ಕೆ ಒಪ್ಪಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
* ಶಾಂತಿ ಸಮ್ಮೇಳನದಲ್ಲಿ ಪರಮಾಣು ಸುರಕ್ಷತೆ, ಆಹಾರ ಭದ್ರತೆ ಮತ್ತು ಖೈದಿಗಳ ವಿನಿಮಯ ಕುರಿತ ಚರ್ಚೆಯಾದವು. 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸ್ವಿಟ್ಟರ್ಲೆಂಡ್ ಅಧ್ಯಕ್ಷೆ ವಿಯೋಲಾ ಪ್ಯಾಟ್ರಿಸಿಯಾ ಅಮೈರ್ಡ್ ಅವರು ಆತಿಥ್ಯ ವಹಿಸಿದ್ದರು.
ಉಕ್ರೇನ್ ಶಾಂತಿ ಒಪ್ಪಂದಕ್ಕೆ 80 ದೇಶಗಳ ಕರೆ
Published by Bhagya R K
18 ಜೂನ್ 2024