* ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುಗಾರ ಎಂಬ ಹಣೆಪಟ್ಟಿ ಭಾರತದಿಂದ ಈಗ ಉಕ್ರೇನ್ ಪಾಲಾಗಿದೆ. ರಷ್ಯಾ ದಾಳಿಯ ನಂತರ, ಉಕ್ರೇನ್ ಶಸ್ತ್ರಾಸ್ತ್ರ ಆಮದಿಯಲ್ಲಿ ಮುಂಚೂಣಿಯಲ್ಲಿದೆ.
* 2020-24ನೇ ಸಾಲಿನಲ್ಲಿ ಉಕ್ರೇನ್ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. 2015-19ನೇ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ ಉಕ್ರೇನ್‌ನ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ 100 ಪಟ್ಟು ಹೆಚ್ಚಾಗಿದೆ.
* 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣಪ್ರಮಾಣದ ದಾಳಿ ನಡೆಸಿದ ಬಳಿಕ, ಕನಿಷ್ಠ 35 ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಿವೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್ (ಎಸ್‌ಐಪಿಆರ್‌ಐ) ತಿಳಿಸಿದೆ.
* ಉಕ್ರೇನ್‌ಗೆ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮೆರಿಕವೇ ಪೂರೈಸುತ್ತಿದೆ. ದೇಶದ ಶೇ.45ರಷ್ಟು ಶಸ್ತ್ರಾಸ್ತ್ರಗಳ ಆಮದು ಅಮೆರಿಕದಿಂದಲೇ ಆಗುತ್ತಿದೆ.
* ಭಾರತ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಮೊದಲಿನಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಶಸ್ತ್ರಾಸ್ತ್ರ ಆಮದಿಯಲ್ಲಿ ಶೇ.3ರಷ್ಟು ಪಾಲು ಹೊಂದಿರುವ ಭಾರತ, 2015-19ಕ್ಕೆ ಹೋಲಿಸಿದರೆ 2020-24ರಲ್ಲಿ ಶೇ.9.3ರಷ್ಟು ಕುಸಿತ ಕಂಡಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಆಮದು ಶೇ.36ಕ್ಕೆ ತಗ್ಗಿದ್ದು, 2010-14ರಲ್ಲಿ ಇದು ಶೇ.72 ಆಗಿತ್ತು.
* ಅಮೆರಿಕ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತು ದೇಶವಾಗಿದ್ದು, ಫ್ರಾನ್ಸ್ ದ್ವಿತೀಯ ಹಾಗೂ ರಷ್ಯಾ ತೃತೀಯ ಸ್ಥಾನದಲ್ಲಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾದ ರಫ್ತಿಗೆ ಹೊಡೆತ ಬಿದ್ದಿದೆ. ಚೀನಾ ನಾಲ್ಕನೇ ಸ್ಥಾನದಲ್ಲಿದೆ.
ಉಕ್ರೇನ್ ಇದೀಗ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುಗಾರ!
Published by Jyoti Angadi
12 ಮಾರ್ಚ್ 2025