* ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ವಿನೂತನ ಯೋಜನೆ ರೂಪಿಸಿದ್ದು, ಜಗತ್ತಿಗೆ ಭಾರತ ನೀಡಿದ ಕೊಡುಗೆಗಳ ಕುರಿತು ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಧನೆಗಳ ಸ್ಮರಿಸುವುದರಜತೆಗೆ ಶಾಲಾ ಕಾಲೇಜುಗಳ ಆವರಣದಲ್ಲಿಯೇ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡಲಾಗಿದೆ.
* ಈ ಕುರಿತು ಯುಜಿಸಿ ಕಾರ್ಯದರ್ಶಿ ಮನೀಷ್ ಜೋಶಿ ಯವರು ಯೋಜನೆ ಅನುಷ್ಠಾನ ಮಾಡುವಂತೆ ಯುಜಿಸಿ ದೇಶಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ಪತ್ರ ಬರೆದಿರುವ ಕುರಿತು ಹೇಳಿದ್ದಾರೆ.
* ಸಾಧನೆಗಳ ಸ್ಮರಣೆ ಜತೆ ಸೆಲ್ಪಿ ಕ್ಲಿಕ್ಕಿಸಲು ಅವಕಾಶ ನೀಡಿರುವುದರಿಂದ ಸಾಧನೆಯತ್ತ ವಿದ್ಯಾರ್ಥಿಗಳ ಮನಸ್ಸು ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವಾಲಯ ನಿಗದಿಪಡಿಸಿದ ಸೆಲ್ಪಿ ಪಾಯಿಂಟ್‌ಗಳಲ್ಲಿ ವಿದ್ಯಾರ್ಥಿಗಳು ಸೆಲ್ಪಿ ಕ್ಲಿಕ್ಕಿಸಿಕೊಳ್ಳಬೇಕಿದೆ.
ಸೋಮವಾರ, 04 ಡಿಸೆಂಬರ್ 2023
5:27 ಅಪರಾಹ್ನ
Daily PDF
UGCಯಿಂದ ವಿದ್ಯಾರ್ಥಿಗಳಿಗೆ ಸೆಲ್ಫಿ ಗೆ ಅವಕಾಶ
Authored by:
Bhagya R K