* ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್ 01 ಸ್ಥಾನಕ್ಕೇರಿದೆ.
* ಟೀಮ್ ಲೀಸ್ ಸರ್ವೀಸಸ್‌ನ ಉದ್ಯೋಗ ಮತ್ತು ವೇತನ ವರದಿ 2024 ರಲ್ಲಿ ತಂತ್ರಜ್ಞಾನ ಮತ್ತು ಬ್ಯುಸಿನೆಸ್ ಹಬ್ ಆಗಿರುವ ಬೆಂಗಳೂರಿನ ಸರಾಸರಿ ವೇತನ ಹೆಚ್ಚಳ ಶೇ. 9.3 ಹಾಗೂ ಸರಾಸರಿ ಏಕೀಕೃತ ಮಾಸಿಕ ಸಂಬಳ ರೂ.29,500 ಇದ್ದು, ಇದು ಇತರೆ ಎಲ್ಲಾ ನಗರಗಳಿಗಿಂತ ಗರಿಷ್ಠ ಮಟ್ಟದಲ್ಲಿದೆ. ಚೆನ್ನೈ ಹಾಗೂ ದೆಹಲಿ ನಂತರದ ಸ್ಥಾನ ಪಡೆದುಕೊಂಡಿವೆ.
* ಈ ವರದಿಯು ತಾತ್ಕಾಲಿಕ ಮತ್ತು ಖಾಯಂ ನೇಮಕಾತಿ ಮಾರುಕಟ್ಟೆಗಳಾದ್ಯಂತ ಏಕೀಕೃತ ವೇತನಗಳ ವಿಶ್ಲೇಷಣೆಯನ್ನು ಆಧರಿಸಿದೆ. ಚೆನ್ನೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿದ್ದು ಕ್ರಮವಾಗಿ ಶೇ. 7.5 ಹಾಗೂ ಶೇ.7.3ರಷ್ಟು ಸರಾಸರಿ ವೇತನ ಹೆಚ್ಚಳ ಹೊಂದಿದೆ.
* ಚೆನ್ನೈನ ಸರಾಸರಿ ಮಾಸಿಕ ವೇತನವು ರೂ 24,500 ರಷ್ಟಿದ್ದರೆ ದೆಹಲಿಯಲ್ಲಿ ಇದು ರೂ 27,800 ತಲುಪಿದೆ. ಈ ಮಧ್ಯೆ ಕೈಗಾರಿಕಾ ರಂಗದಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಗಮನಾರ್ಹವಾದ ಶೇ. 8.4 ರಷ್ಟು ವೇತನ ಹೆಚ್ಚಳವಿದೆ.
ಗುರುವಾರ, 31 ಅಕ್ಟೋಬರ್ 2024
11:21 ಪೂರ್ವಾಹ್ನ
Daily PDF
ಉದ್ಯೋಗಾವಕಾಶ ಮತ್ತು ವೇತನ ಅವಧಿಯಲ್ಲಿ ದೇಶದ ಮೊದಲ ನಗರ ಬೆಂಗಳೂರು
Authored by:
Bhagya R K