* ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಟ್ರಂಪ್ ಬೆಂಬಲಿಸಿದ್ದ ಉದ್ಯಮಿ ಎಲಾನ್ ಮಸ್ಕ್ ಸಂಪತ್ತಿನ ಮೌಲ್ಯ 300 ಬಿಲಿಯನ್ ದಾಟಿದೆ.
* $300 ಶತಕೋಟಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಎಲಾನ್ ಮಸ್ಕ್ ಒಡೆತನದ ಕಂಪನಿಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಶುಕ್ರವಾರ(ನವೆಂಬರ್ 08) ಒಂದೇ ದಿನದಲ್ಲಿ ಟೆಸ್ಲಾ ಷೇರುಗಳು ಶೇ. 8.19 ರಷ್ಟು ಏರಿಕೆ ಕಂಡು ಕಂಪನಿಯ ಮೌಲ್ಯ 321.22 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು.
* ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್, ಮತ್ತು ಫೋರ್ಬ್ಸ್ ಪ್ರಕಾರ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಈ ಅಂಕಿಅಂಶವನ್ನು ತಲುಪಿದೆ.
* ಈ ಹಿನ್ನೆಲೆಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸಂಪತ್ತಿನ ಮೌಲ್ಯ ಸಹ ಶೇ. 4.71 ರಷ್ಟು ಏರಿಕೆಯಾಗಿದ್ದು $304 ಬಿಲಿಯನ್ ಡಾಲರ್‌ಗೆ ತಲುಪಿದೆ. ಇನ್ನು ಅಮೆರಿಕದ ಚುನಾವಣೆಗಳು ಮುನ್ನ ಮಸ್ಕ್ ಸಂಪತ್ತು 250 ಬಿಲಿಯನ್ ಡಾಲರ್‌ನಷ್ಟಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಸ್ಕ್ ಸಂಪತ್ತು ಕೇವಲ 5 ದಿನದಲ್ಲಿ ಶೇ.30 ರಷ್ಟು($54 ಶತಕೋಟಿಗಿಂತ) ಹೆಚ್ಚಿದ್ದು, ಮೊದಲ ಬಾರಿಗೆ 300 ಬಿಲಿಯನ್ ಡಾಲರ್ ಗಡಿ ದಾಟಿದೆ. ಈ ಮೂಲಕ ಮಸ್ಕ್ ಪ್ರಪಂಚದ ನಂ. 1 ಶ್ರೀಮಂತ ಪಟ್ಟದಲ್ಲೇ ಮುಂದುವರೆದಿದ್ದಾರೆ.
* ಎಲಾನ್ ಮಸ್ಕ್ ಹೊರತುಪಡಿಸಿ ಒರಾಕಲ್‌ನ ಲ್ಯಾರಿ ಎಲಿಸನ್ $ 230.7 ಬಿಲಿಯನ್ ಸಂಪತ್ತನ್ನು ಹೊಂದುವ ಮೂಲಕ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.
* ಅಮೆಜಾನ್‌ನ ಜೆಫ್ ಬೆಜೋಸ್ $224.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದಾರೆ. ಮಾರ್ಕ್ ಜುಕರ್‌ಬರ್ಗ್ $203.8 ಬಿಲಿಯನ್ ಸಂಪತ್ತನ್ನು ಹೊಂದಿದ್ದರೆ, ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ $165.5 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದೆ.
ಶನಿವಾರ, 09 ನವೆಂಬರ್ 2024
5:32 ಅಪರಾಹ್ನ
Daily PDF
ಟ್ರಂಪ್ ಅವರ ವಿಜಯದ ನಂತರ $300 ಬಿಲಿಯನ್ ತಲುಪಿದ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯ
Authored by:
Jyoti Angadi