* ಜುಲೈ 1ರಿಂದ ತತ್ಕಾಲ್ ಯೋಜನೆಯಡಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಅವಕಾಶ ಇರುತ್ತದೆ ಎಂದು ರೈಲ್ವೆ ಸಚಿವಾಲಯ ಜೂನ್ 10ರಂದು ತಿಳಿಸಿದೆ.
* ತತ್ಕಾಲ್ ಯೋಜನೆಯ ಪ್ರಯೋಜನವನ್ನು ಸಾಮಾನ್ಯ ಪ್ರಯಾಣಿಕರಿಗೂ ನೀಡಲು ಈ ಕ್ರಮ ಜಾರಿಗೆ ತರಲಾಗುತ್ತಿದೆ.
* ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಲು ಆಧಾರ್ ದೃಢೀಕರಣ ಅಗತ್ಯವಾಗುತ್ತದೆ.
* ಬುಕ್ಕಿಂಗ್ ಆರಂಭದ ಮೊದಲ 30 ನಿಮಿಷಗಳು ಅಧಿಕೃತ ಏಜೆಂಟ್‌ಗಳಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ. ಬೆಳಿಗ್ಗೆ 10ರಿಂದ 10.30ರವರೆಗೆ ಎಸಿ ಕೋಚ್‌ಗಳಿಗೆ ಹಾಗೂ 11ರಿಂದ 11.30ರವರೆಗೆ ನಾನ್ ಎಸಿ ಕೋಚ್‌ಗಳಿಗೆ ಈ ನಿಯಮ ಅನ್ವಯಿಸುತ್ತದೆ.
* ಜುಲೈ 15ರಿಂದ ತತ್ಕಾಲ್ ಟಿಕೆಟ್‌ಗಳಿಗಾಗಿ ಆಧಾರ್ ಆಧಾರಿತ ಒಟಿಪಿ ದೃಢೀಕರಣ ಕಡ್ಡಾಯವಾಗಲಿದೆ. ಈ ಪ್ರಕ್ರಿಯೆಯ ನಂತರವೇ ಪಿಆರ್‌ಎಸ್ ಕೌಂಟರ್‌ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದು.
ಬುಧವಾರ, 11 ಜೂನ್ 2025
8:57 ಪೂರ್ವಾಹ್ನ
Daily PDF
ತತ್ಕಾಲ್ ಟಿಕೆಟ್ಗಳಿಗೆ ಆಧಾರ್ ಕಡ್ಡಾಯ: ಜುಲೈ 1ರಿಂದ ಹೊಸ ನಿಯಮ
Authored by:
Jyoti Angadi