* 18ನೇ ಶತಮಾನದಲ್ಲಿದ್ದ ಟಿಪ್ಪು ಸುಲ್ತಾನಿನ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಸ್ಮರಣಾರ್ಥವಾಗಿ ಫ್ರಾನ್ಸ್ ದೇಶವು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
* ನೂರ್ ಇನಾಯತ್ ಖಾನ್ ಅವರು ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಮೈತ್ರಿ ಬಲಗಳಿಗೆ ಕಾರ್ಯನಿರ್ವಹಿಸಿದ ಅನನ್ಯ ಧೈರ್ಯಕ್ಕಾಗಿ ಫ್ರಾನ್ಸ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ “Croix de Guerre” ಪದಕಕ್ಕೂ ಅರ್ಹರಾಗಿದ್ದರು.
* ನೂರ್ ಈ ಪುರಸ್ಕಾರಕ್ಕೆ ಭಾಜನರಾದ ಮೊದಲ ಭಾರತ ಮೂಲದ ಮಹಿಳೆ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ. ಈ ತಿಂಗಳು 2 ನೇ ಮಹಾಯುದ್ಧಕ್ಕೆ 80 ವರ್ಷ ಹಿನ್ನೆಲೆ 12ಜನರ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡಿದ್ದೂ, ನೂರ್ ಕೂಡ ಇದರಲ್ಲಿ ಒಬ್ಬರು.
* ನೂರ್ ಎರಡನೇ ಮಹಾಯುದ್ಧದ ಕಾಲದಲ್ಲಿ SOE (Special Operations Executive) ಸಂಘಟನೆಯ ಗುಪ್ತಚರ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.
🔹 ಯುದ್ಧಕಾಲದ ಸೇವೆ
- 1943ರಲ್ಲಿ ಅವರು 2ನೇ ಮಹಾಯುದ್ಧದ ವೇಳೆ ಫ್ರಾನ್ಸ್‌ಗೆ ವಿಶೇಷ ಗುಪ್ತಚರ ಆಗಿ ಕಳುಹಿಸಲ್ಪಟ್ಟರು.
- ಅವರು ವೈಯರ್‌ಲೆಸ್ ಆಪರೇಟರ್ ಆಗಿ ಮೈತ್ರಿ ಬಲಗಳಿಗೆ ನಾಜಿ ವಿರುದ್ಧ ಮಾಹಿತಿ ಕಳುಹಿಸುವ ಜವಾಬ್ಧಾರಿಯನ್ನು ನಿರ್ವಹಿಸಿದರು.
- ಬಂಧಿತವಾಗುವವರೆಗೆ ಅವರು ತೋರಿದ ಧೈರ್ಯ ಇಂದಿಗೂ ವಿಶ್ವದ ಸ್ಮರಣೆ.
ಇದು ಭಾರತದೊಂದಿಗೆ ಫ್ರಾನ್ಸ್ ಹೊಂದಿರುವ ಐತಿಹಾಸಿಕ ಬಾಂಧವ್ಯ ಮತ್ತು ಎರಡೂ ದೇಶಗಳ ನಡುವೆ ಹಂಚಿಕೊಳ್ಳುವ ಸ್ವಾತಂತ್ರ್ಯ ಮೌಲ್ಯಗಳ ನಿದರ್ಶನ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.