* ಇಂಗ್ಲೆಂಡ್ ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ ಅಬ್ಬರ ಮುಂದುವರಿಸಿಕೊಂಡು ಹೋಗಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ 43 ಎಸೆತಗಳಲ್ಲಿ 74 ರನ್ ಬಾರಿಸಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.
* ಈ ಅಬ್ಬರದ ಅರ್ಧಶತಕದೊಂದಿಗೆ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ 14,000 ರನ್‌ಗಳನ್ನು ಪೂರೈಸಿದ್ದಾರೆ. ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿರುವ ಹೇಲ್ಸ್, ವಿಶ್ವದಲ್ಲಿ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯು ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 455 ಇನಿಂಗ್ಸ್‌ಗಳಲ್ಲಿ 14,562 ರನ್ ಬಾರಿಸಿದ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಕೀರನ್ ಪೊಲಾರ್ಡ್ 14,012 ರನ್‌ಗಳನ್ನು ಗಳಿಸಿದ್ದಾರೆ.
* ಇದೀಗ ಹೇಲ್ಸ್ 505 ಇನಿಂಗ್ಸ್‌ಗಳಲ್ಲಿ 14,024 ರನ್‌ಗಳನ್ನು ಬಾರಿಸಿ ಪೊಲಾರ್ಡ್ ಅವರನ್ನು ಹಿಂದಿಕ್ಕಿದ್ದಾರೆ. ಹೀಗಾಗಿ ಟಿ20 ಇತಿಹಾಸದಲ್ಲಿ ಗೇಲ್ ನಂತರ ಅತ್ಯಧಿಕ ರನ್‌ಗಳಿಸಿದ 2ನೇ ಬ್ಯಾಟರ್ ಆಗಿದ್ದಾರೆ.
* ಹೊಸ ದಾಖಲೆ ಬರೆಯಲು ಹೇಲ್ಸ್‌ಗೆ ಇನ್ನೂ 539 ರನ್‌ಗಳು ಬೇಕಿದ್ದು, ಮುಂದಿನ ಟಿ20 ಲೀಗ್‌ಗಳಲ್ಲಿ ಗೇಲ್‌ರ ವಿಶ್ವ ದಾಖಲೆ ಮುರಿಯುವ ನಿರೀಕ್ಷೆ ಹೆಚ್ಚಾಗಿದೆ.
ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಪೂರೈಸಿದ ಅಲೆಕ್ಸ್ ಹೇಲ್ಸ್
Published by Jyoti Angadi
02 ಸೆಪ್ಟೆಂಬರ್ 2025