* 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ದಿಗ್ಗಜ ಟೆನಿಸ್ ಆಟಗಾರ, ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ರಫೆಲ್ ನಡಾಲ್ (Rafael Nadal), ಟೆನಿಸ್‌ಗೆ ಭಾವುಕ ವಿದಾಯ ಹೇಳಿದ್ದಾರೆ.
* 'ಕಿಂಗ್ ಆಫ್ ಕ್ಲೇ' ಎಂದೇ ಜನಪ್ರಿಯರಾಗಿದ್ದ ಸ್ಪೇನ್ ನ ಟೆನಿಸ್ ದಿಗ್ಗಜ ರಫೆಲ್ ನಡಾಲ್ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ವಿದಾಯ ಪಂದ್ಯದಲ್ಲಿ ಸೋತು, ವೃತ್ತಿಬದುಕಿಗೆ ಸೋಲಿನ ವಿದಾಯ ಹೇಳಿದ್ದಾರೆ.
* ನ.19 ರಂದು ನಡೆದ ನೆದರ್‌ಲ್ಯಾಂಡ್ (Netherland) ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ಆಟಗಾರ ಬೊಟಿಕ್ ವ್ಯಾನ್ ಡಿ ಜಾಂಡ್ಶುಲ್ಪ್ ವಿರುದ್ಧ 4-6, 4-6 ನೇರ ಸೆಟ್‌ಗಳಲ್ಲಿ ನಡಾಲ್ ಸೋಲನ್ನು ಅನುಭವಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು.
* 2024ರ ಅಕ್ಟೋಬರ್ ತಿಂಗಳಲ್ಲಿ ಡೇವಿಸ್ ಕಪ್ ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಟೆನಿಸ್ ದಿಗ್ಗಜ ನಡಾಲ್ ಈ ಹಿಂದೆಯೇ ಹೇಳಿದ್ದರು. ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ ಅವರ ಭಾವುಕ ವಿದಾಯ ಹೇಳಿದ್ದಾರೆ.
* 23 ವರ್ಷಗಳ ನಡಾಲ್ ತಮ್ಮ ವರ್ಣರಂಜಿತ ಟೆನಿಸ್ ಜೀವನದಲ್ಲಿ 22 ಗ್ರಾಂಡ್ ಸ್ಲಾಮ್ ಸಹಿತ ಹಲವು ಪ್ರಮುಖ ಪ್ರಶಸ್ತಿಗಳನ್ನು ನಡಾಲ್ ಗೆದ್ದಿದ್ದಾರೆ. ಇದರಲ್ಲಿ 14 ರೋಲಂಡ್ ಗ್ಯಾರೋಸ್‌ನ ಆವೆ ಅಂಕಣದಲ್ಲಿ ಗೆದ್ದ ಫ್ರೆಂಚ್ ಓಪನ್ ಪ್ರಶಸ್ತಿಗಳು ಸೇರಿವೆ.
* 2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದಿದ್ದಾರೆ. ನೆದರ್‌ಲ್ಯಾಂಡ್ ವಿರುದ್ಧದ ಆಡಿದ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರು.
ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ರಫೆಲ್ ನಡಾಲ್
Published by Jyoti Angadi
21 ನವೆಂಬರ್ 2024