* ಟಾಟಾ ಗ್ರೂಪ್ ನ ಮಾಜಿ ಗೌರವಾಧ್ಯಕ್ಷ ದಿವಂಗತ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಲಿದ್ದಾರೆ. ಟಾಟಾ ಟ್ರಸ್ಟ್‌ನ ಹೊಸ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನು ಅವಿರೋಧವಾಗಿ ಅಕ್ಟೋಬರ್ 11 ರಂದು ಆಯ್ಕೆ ಮಾಡಲಾಯಿತು.
* ಈ ಮೂಲಕ 403 ಬಿಲಿಯನ್ ಡಾಲರ್ ಟಾಟಾ ಆಸ್ತಿಯನ್ನು ನೋಡಿಕೊಳ್ಳಲಿದ್ದಾರೆ. ಸರ್ ರತನ್ ಟಾಟಾ ಟ್ರಸ್ಟ್‌ನ 6 ನೇ ಅಧ್ಯಕ್ಷರಾಗಿ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ 11 ನೇ ಅಧ್ಯಕ್ಷರಾಗಿ ನೇಮಿಸಲಾಗಿದೆ.
* ನೋಯೆಲ್ ಅವರು ಟ್ರೆಂಟ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದಾರೆ. ನೋಯೆಲ್ ಅವರು ಟೈಟಾನ್ ಕಂಪನಿ ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿಯೂ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.
* ರತನ್ ಟಾಟಾ ಅವರ ತಂದೆ ನೇವಲ್ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಸೂನಿ ಕಮಿಶರಿಯಟ್, ಎರಡನೇ ಪತ್ನಿ ಸ್ವಿಟ್ಜರ್ಲೆಂಡ್‌ನ ಉದ್ಯಮಿ ಸಿಮೋನ್ ಡ್ಯುನೊಯರ್. ನೇವಲ್ ಮತ್ತು ಸೂನಿ ದಂಪತಿಗೆ ರತನ್ ಮತ್ತು ಜಿಮ್ಮಿ ಟಾಟಾ ಜನಿಸಿದರು.
* 1940 ರದಶಕದಲ್ಲಿ ನೇವಲ್ ಮತ್ತು ಸೂನಿ ದಂಪತಿ ಬೇರ್ಪಟ್ಟಿದ್ದರು. ಬೇರ್ಪಟ್ಟ ನಂತರ ಸಿಮೋನ್ ಡ್ಯುನೊಯರ್ ಅವರನ್ನು 1955 ರಲ್ಲಿ ನೇವಲ್ ವಿವಾಹವಾದರು. ಈ ದಂಪತಿಯ ಪುತ್ರನೇ ನೇಯಲ್ ಟಾಟಾ.
* ಟಾಟಾ ಟ್ರಸ್ಟ್ಸ್, 14 ಟ್ರಸ್ಟ್‌ಗಳನ್ನು ನಿರ್ವಹಿಸುವ ಮತ್ತು ಟಾಟಾ ಸನ್ಸ್‌ನ ಶೇಕಡಾ 66 ರಷ್ಟು ಮಾಲೀಕತ್ವ ಹೊಂದಿರುವ ಸಂಸ್ಥೆಯಾಗಿದ್ದು, ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
* 2000 ರ ದಶಕದ ಆರಂಭದಲ್ಲಿ ಗುಂಪಿಗೆ ಸೇರಿದಾಗಿನಿಂದ ನೋಯೆಲ್ avaru ಅದರ ವಿಸ್ತರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, 2019 ರಲ್ಲಿ ರತನ್ ಟಾಟಾ ಟ್ರಸ್ಟ್‌ನ ಮಂಡಳಿಗೆ ಸೇರ್ಪಡೆಯಾದರು. 2018 ರಲ್ಲಿ ಟೈಟಾನ್ ಮತ್ತು 2022 ರಲ್ಲಿ ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿ ನೇಮಕಗೊಂಡರು.
ಶನಿವಾರ, 12 ಅಕ್ಟೋಬರ್ 2024
8:09 ಪೂರ್ವಾಹ್ನ
Daily PDF
ಟಾಟಾ ಟ್ರಸ್ಟ್: ರತನ್ ಟಾಟಾ ಸಹೋದರ ನೋಯೆಲ್ ಟಾಟಾ ನೂತನ ಅಧ್ಯಕ್ಷರಾಗಿ ನೇಮಕ
Authored by:
Bhagya R K