➤ ಸತೀಶ ಗುಜ್ರಾಲ್ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಖ್ಯಾತ ಕಲಾವಿದ ಹಾಗೂ ಶಿಲ್ಪಿ ಸತೀಶ್ ಗುಜ್ರಾಲ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ವಿಶೇಷ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.
➤ ಅಫ್ಘಾನಿಸ್ತಾನ ವೈದ್ಯಕೀಯ ಪದವಿಗಳ ನೋಂದಣಿ ಸ್ಥಗಿತಗೊಳಿಸಿದ ಪಾಕಿಸ್ತಾನ: ಪಾಕಿಸ್ತಾನ ವೈದ್ಯಕೀಯ ಮತ್ತು ದಂತವೈದ್ಯಕೀಯ ಮಂಡಳಿಯು (PMDC) ಅಫ್ಘಾನಿಸ್ತಾನದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ವೈದ್ಯಕೀಯ ಪದವಿಗಳನ್ನು ವೃತ್ತಿಪರ ನೋಂದಣಿಗೆ ಸ್ವೀಕರಿಸುವುದನ್ನು ನಿಲ್ಲಿಸಿದೆ.
➤ ರಕ್ಷಣಾ ವಲಯದಲ್ಲಿ ಜಿಯೋ-ಎಐ ತಂತ್ರಜ್ಞಾನಕ್ಕೆ ಬಿಇಎಲ್ ಒಪ್ಪಂದ: ರಕ್ಷಣಾ ವಲಯದಲ್ಲಿ ಜಿಐಎಸ್ (GIS) ಮತ್ತು ಜಿಯೋ-ಎಐ (GeoAI) ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಹಾಗೂ ಎಸಿ ಇಂಡಿಯಾ ಸಂಸ್ಥೆಗಳು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.
➤ ಅಂಗಾಂಗ ಕಸಿಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಮೊದಲ ಸ್ಥಾನ: ಭಾರತದಲ್ಲಿ 2025ನೇ ಸಾಲಿನಲ್ಲಿ ಒಟ್ಟು 20,138 ಅಂಗಾಂಗ ಕಸಿಗಳು ದಾಖಲಾಗುವ ಮೂಲಕ 20,000 ಗಡಿ ದಾಟಿದ್ದು, ಜೀವಂತ ದಾನಿಗಳ ಅಂಗಾಂಗ ಕಸಿ ಕ್ಷೇತ್ರದಲ್ಲಿ ಭಾರತವು ಪ್ರಪಂಚದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ.
➤ ಆಳ ಸಮುದ್ರ ಯೋಜನೆಯ ಬೆಂಬಲಕ್ಕೆ 'ನ್ಯಾಷನಲ್ ಟೆಕ್ನಥಾನ್' ಚಾಲನೆ: ಭಾರತದ ಆಳ ಸಮುದ್ರ ಮಿಷನ್‌ಗೆ (Deep Ocean Mission) ಬೆಂಬಲ ನೀಡಲು ಹಾಗೂ ಸಮುದ್ರದಾಳದ ಪಾಲಿ ಮೆಟಾಲಿಕ್ ಗಂಟುಗಳ ಸುಸ್ಥಿರ ಸಂಗ್ರಹಣೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಲು 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ' ರಾಷ್ಟ್ರೀಯ ಟೆಕ್ನಥಾನ್ ಅನ್ನು ಪ್ರಾರಂಭಿಸಿದೆ.
➤ ಗ್ರಾಹಕರ 'ತಿಳಿಯುವ ಹಕ್ಕಿನ' ಅರ್ಜಿಗೆ ಉತ್ತರಿಸಲು ಸುಪ್ರೀಂ ಕೋರ್ಟ್ ಸೂಚನೆ: ಉತ್ಪನ್ನಗಳ ಗುಣಮಟ್ಟ, ಶುದ್ಧತೆ ಹಾಗೂ ಮಾರಾಟಗಾರರ ವಿವರಗಳನ್ನು ತಿಳಿಯುವ ಗ್ರಾಹಕರ 'ತಿಳಿಯುವ ಹಕ್ಕನ್ನು' ಮಾನ್ಯ ಮಾಡುವಂತೆ ಕೋರಿದ ಅರ್ಜಿಗೆ ಆರು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಲಾವಕಾಶ ನೀಡಿದೆ.