➤ ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗ ನೀಡಲು ಹಾಗೂ ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ವಿಶ್ವಬ್ಯಾಂಕ್ (World Bank) ಬರೋಬ್ಬರಿ 1.5 ಬಿಲಿಯನ್ ಡಾಲರ್ (ಸುಮಾರು ₹14,188 ಕೋಟಿ) ಸಾಲದ ನೆರವನ್ನು ಅನುಮೋದಿಸಿದೆ. ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಈ ಸಾಲವನ್ನು 'ಅಭಿವೃದ್ಧಿ ನೀತಿ ಹಣಕಾಸು' (Development Policy Financing - DPF) ಕಾರ್ಯಾಚರಣೆಯಡಿಯಲ್ಲಿ ಒದಗಿಸಲಾಗುತ್ತಿದೆ.
➤ 1.1 ಕೋಟಿ ಉದ್ಯೋಗ ಸೃಷ್ಟಿಯ ಗುರಿ: ವಿಶ್ವಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಎರಡು ದಶಕಗಳಲ್ಲಿ (20 ವರ್ಷ) ಭಾರತದ ಶ್ರಮ ಮಾರುಕಟ್ಟೆಗೆ ಪ್ರವೇಶಿಸುವ ಸುಮಾರು 1.1 ಕೋಟಿಗೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ಆರ್ಥಿಕ ನೆರವು ಪೂರಕವಾಗಲಿದೆ. ಈ ಕಾರ್ಯಕ್ರಮವು ವಿಶ್ವಬ್ಯಾಂಕ್ ಭಾರತದೊಂದಿಗೆ ಹೊಂದಿರುವ ದೇಶದ ಪಾಲುದಾರಿಕೆ ಚೌಕಟ್ಟು (Country Partnership Framework - CPF 2031) ಯೋಜನೆಯೊಂದಿಗೆ ಜೋಡಿಸಲ್ಪಟ್ಟಿದೆ.
➤ ಉತ್ತೇಜನ ಸಿಗಲಿರುವ ಕ್ಷೇತ್ರಗಳು :
  • ರಚನಾತ್ಮಕ ಸುಧಾರಣೆಗಳು: ಸರಕು ಮತ್ತು ಸೇವಾ ತೆರಿಗೆ (GST) ದರಗಳ ಸರಳೀಕರಣ.
  • ವ್ಯಾಪಾರ ಒಪ್ಪಂದಗಳು: ಮುಕ್ತ ಮತ್ತು ಸುಲಭ ವ್ಯಾಪಾರಕ್ಕೆ ಉತ್ತೇಜನ.
  • ಉದ್ಯೋಗ ಸೃಷ್ಟಿ: ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸುವ ಮೂಲಕ ಉದ್ಯೋಗಾವಕಾಶಗಳ ವಿಸ್ತರಣೆ.
➤ ಕರ್ನಾಟಕ ಸರ್ಕಾರದ ಸುಗ್ರೀವಾಜ್ಞೆ ಮತ್ತು ಇತರ ರಾಜ್ಯಗಳ ಪಾಠ: ಕಿರು ಹಣಕಾಸು ಸಂಸ್ಥೆಗಳಿಂದ ಗ್ರಾಮೀಣ ಮತ್ತು ಬಡ ಸಾಲಗಾರರಿಗೆ ಆಗುತ್ತಿದ್ದ ಕಿರುಕುಳವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಕಳೆದ ವರ್ಷದ ಫೆಬ್ರವರಿಯಲ್ಲಿ ವಿಶೇಷ ಸುಗ್ರೀವಾಜ್ಞೆಯನ್ನು (Ordinance) ಜಾರಿಗೆ ತಂದಿತ್ತು.